ಮಂಡ್ಯದ ಕ್ಯಾಮೇಗೌಡರ ಶ್ರಮ ಸಾಧನೆಗೆ ಪ್ರಧಾನಿ ಫಿದಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.28-ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿಯ ಹಿರಿಯ ರೈತ ಮತ್ತು ಪರಿಸರಪ್ರೇಮಿ ಕ್ಯಾಮೇಗೌಡರ ಶ್ರಮ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಪ್ರತಿ ತಿಂಗಳ ಕೊನೆ ಭಾನುವಾರ ಆಕಾಶವಾಣಿಯಲ್ಲಿ ಬಿತ್ತರವಾಗುವ ಮನ್ ಕಿ ಬಾತ್ ಬಾನುಲಿ ಭಾಷಣದಲ್ಲಿ 84 ವರ್ಷದ ಕ್ಯಾಮೇಗೌಡರ ಸಾಧನೆಯನ್ನು ಉಲ್ಲೇಖಿಸಿ ಅವರಂತೆಯೇ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಜನತೆಗೆ ಕರೆ ನೀಡಿದರು.

ಗ್ರಾಮದ ಪ್ರಗತಿಪರ ರೈತರಾಗಿರುವ ಇವರು ತಮ್ಮ ಹಳ್ಳಿಯಲ್ಲಿ 17 ಸಣ್ಣಪುಟ್ಟ ಕೆರೆಗಳನ್ನು ನಿರ್ಮಿಸಿ ನೀರಿನ ಅಭಾವ ನೀಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಜೊತೆಗೆ ಪರಿಸರ ಸಂರಕ್ಷಣೆಗೂ ಶ್ರಮ ವಹಿಸಿದ್ದಾರೆ. ಇವರ ಸಾಧನೆ ಅನುಕರಣೀಯ ಮತ್ತು ಎಲ್ಲರಿಗೂ ಆದರ್ಶಪ್ರಾಯ ಎಂದು ಮೋದಿ ಬಣ್ಣಿಸಿದರು.

ನಮ್ಮ ಪರಿಸರ ರಕ್ಷಣೆ ಎಲ್ಲರ ಆದ್ಯಕರ್ತವ್ಯವಾಗಿದೆ. ಪ್ರತಿಯೊಬ್ಬರು ಕೂಡ ಪರಿಸರ ರಕ್ಷಣೆಗೆ ಮುಂದಾಗಬೇಕು. ಹಿರಿಯ ರೈತ ಕಾಮೇಗೌಡರ ಆದರ್ಶವನ್ನು ನಿದರ್ಶನವಾಗಿಟ್ಟುಕೊಂಡು ಗ್ರಾಮದಲ್ಲಿ ಎಲ್ಲರೂ ಶ್ರಮ ಸಾಧನೆಗೆ ಕೈ ಜೋಡಿಸಬೇಕೆಂದು ಮೋದಿ ಸಲಹೆ ಮಾಡಿದರು.

Facebook Comments