ನೀರಿನ ಸದ್ಬಳಕೆಗಾಗಿ ‘ಜಲ ರಕ್ಷಾ ಅಭಿಯಾನ’ : ಮೋದಿ ಮನ್ ಕಿ ಬಾತ್ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.28- ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದು, ಜೀವ ಜಲ ಸಂರಕ್ಷಣೆಗೆ ಈಗ ಸೂಕ್ತ ಸಮಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ಕಾರ್ಯಕ್ರಮವಾದ ಮನ್‍ಕಿಬಾತ್‍ನಲ್ಲಿ ಜಲ ಸಂರಕ್ಷಣೆಯ ಸಂದೇಶ ನೀಡಿದ್ದಾರೆ.

ನೀರಿನ ಸಂರಕ್ಷಣೆ ಹಾಗೂ ಮಹತ್ವದ ಬಗ್ಗೆ ಮಾತನಾಡುತ್ತಾ ಮನ್‍ಕಿಬಾತ್ ಆರಂಭಿಸಿದ ಮೋದಿಯವರು, ಬೇಸಿಗೆ ಕಾಲ ಆರಂಭವಾಗುತ್ತಿದೆ. ಕುಡಿಯುವ ನೀರಿಗೆ ಎಲ್ಲೂ ಕೂಡ ಸಮಸ್ಯೆ ಆಗಬಾರದು. ಈ ಹಿನ್ನಲೆಯಲ್ಲಿ ಜಲ ಮೂಲಗಳನ್ನು ಸಂರಕ್ಷಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಮುಂಗಾರು ಹಂಗಾಮಿನೊಳಗೆ, ನಮ್ಮ ಸುತ್ತಮುತ್ತಲಿರುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಸಂಗ್ರಹವಾಗುವಂತೆ ಅಣಿಗೊಳಸಬೇಕು. ಜಲ ಸಂರಕ್ಷಣೆ ಕುರಿತು ಜನ ಜಾಗೃತಿ ಮೂಡಿಸಲು ಕೇಂದ್ರ ಜಲ ಶಕ್ತಿ ಸಚಿವಾಲಯವು ಮಳೆ ನೀರು ಹಿಡಿಯಿರಿ ಅಭಿಯಾನ ಪ್ರಾರಂಭಿಸಲಾಗುವುದು. ಮಳೆ ಬಿದ್ದ ಜಾಗದಲ್ಲಿ ನೀರು ಸಂಗ್ರಹವಾಗಬೇಕು ಎಂಬುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin