ಪ್ರಧಾನಿ ಮೋದಿಯವರ ‘ಮನ್ಕಿಬಾತ್’ ಕಾರ್ಯಕ್ರಮ ‘ಹಂಗಾಮಾ’ದಲ್ಲಿ ಲೈವ್ ಸ್ಟ್ರೀಮಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಭಾರತದ ಪ್ರಮುಖ ಡಿಜಿಟಲ್ ಮನರಂಜನಾ ಕಂಪನಿಯಾದ ಹಂಗಾಮಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಭಾಷಣ ‘ಮನ್ಕಿಬಾತ್’ ನಲೈವ್-ಸ್ಟ್ರೀಮಿಂಗ್ ಪಾಲುದಾರರಾಗಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಧ್ವನಿ ಮತ್ತು ಅವಕಾಶಗಳ ಅಗತ್ಯವಿದೆ, ಅದು ನಿಜವಾದ ಆನಂದವನ್ನುಅನುಭವಿಸಲು ಅನುವು ಮಾಡಿಕೊಡುತ್ತದೆ. ಸ್ವಾತಂತ್ರ್ಯದಸವಲತ್ತುಗಳು, ಪರಿಹಾರಗಳನ್ನು ಹುಡುಕಲು ತಮಗೆ ಸಂಬಂಧಿಸಿದ ಸಮಸ್ಯೆಗಳನ್ನುಚರ್ಚಿಸಲು ಅವಕಾಶ ನೀಡುತ್ತದೆ.

ರಾಜಕೀಯ,ಪಕ್ಷಪಾತ ಮತ್ತು ಅಧಿಕಾರಕ್ಕಿಂತ ಮಿಗಿಲಾಗಿ ಪ್ರಧಾನಿ ನರೇಂದ್ರ ಮೋದಿಯವರ ರೇಡಿಯೊ ಕಾರ್ಯಕ್ರಮ ಮನ್ಕಿಬಾತ್ಅನ್ನು ಹಂಗಾಮಾ ತನ್ನಚಾನೆಲ್‌ಗಳಾದ ಹಂಗಾಮಾಪ್ಲೇ ಮತ್ತು ಹಂಗಾಮಾಮ್ಯೂಸಿಕ್ ಮೂಲಕ ನವೆಂಬರ್ 28 ರಂದುಬೆಳಿಗ್ಗೆ 11 ಗಂಟೆಯಿಂದ ಎಲ್ಲಾ ಪ್ರೇಕ್ಷಕರಿಗೆ ತಲುಪಿಸುವ ಗುರಿಯನ್ನು ಹೊಂದಿದೆ.

ಭಾರತೀಯ ಜನಶಕ್ತಿಯ ಮೇಲೆ ಗಮನಹರಿಸಿ ನಡೆಸುವ ಕಾರ್ಯಕ್ರಮ ಮನ್ಕಿಬಾತ್ಆಗಿದ್ದುಇದಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ದೊರಕಿದೆ. ರೇಡಿಯೊ ಕಾರ್ಯಕ್ರಮದಲ್ಲಿ ಕಾಲಕಾಲಕ್ಕೆ ತಕ್ಕ ಅಭಿಪ್ರಾಯ, ಸಮಸ್ಯೆಗಳು, ಸಂತೋಷ ಮತ್ತು ವಿಮರ್ಶಾತ್ಮಕ ಪ್ರತಿಕ್ರಿಯೆಯನ್ನುಅವರು ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಸ್ವಚ್ಛತೆ, ಫಿಟ್ನೆಸ್ಅನ್ನು ಜನಪ್ರಿಯಗೊಳಿಸುವುದು, ಮಾದಕವಸ್ತುಗಳ ವಿರುದ್ಧ ಹೋರಾಡುವುದು, ಹೆಣ್ಣುಮಕ್ಕಳನ್ನುಉಳಿಸುವುದು ಮತ್ತು ಭಾರತದ ಪ್ರಗತಿಯತ್ತ ಸಾಗುತ್ತಿರುವ ವಿಕಲಾಂಗರ ಕಲ್ಯಾಣದಂತಹ ಹಲವಾರು ಸಾಮೂಹಿಕ ಚಳುವಳಿಗಳನ್ನು ಪ್ರಚೋದಿಸುತ್ತದೆ.

ಹಂಗಾಮಾ ಪ್ಲೇ ಮತ್ತು ಹಂಗಾಮಾಮ್ಯೂಸಿಕ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ಮನ್ ಕಿ ಬಾತ್ ಮತ್ತಷ್ಟು ಜನರನ್ನು ಆಕರ್ಷಿಸುತ್ತದೆ, ವಿಭಿನ್ನ ಸಂವೇದನೆಗಳನ್ನು ಪೂರೈಸುತ್ತದೆ ಮತ್ತು ಗಡಿಗಳನ್ನು ಮೀರಿ ಪ್ರಯಾಣಿಸುತ್ತದೆ. ಜನಪ್ರಿಯ ಡಿಜಿಟಲ್ ಪ್ಲಾಟಫಾರಂ ನ ಎಲ್ಲಾ ಶಕ್ತಿ ಮತ್ತು ಪ್ರೇಕ್ಷಕರೊಂದಿಗೆ ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿಯ ಕಾರ್ಯಸೂಚಿಯನ್ನುಹೆಚ್ಚಿಸುತ್ತದೆ ಮತ್ತು ಉತ್ತೇಜಿಸುತ್ತದೆ.

ಈ ಪಾಲುದಾರಿಕೆ ಬಗ್ಗೆ ಮಾತನಾಡುತ್ತಾ, ಹಂಗಾಮಾ ಡಿಜಿಟಲ್ಮೀಡಿಯಾದ ಸಂಸ್ಥಾಪಕ ಮತ್ತು ಸಿಇಒ ನೀರಜ್ರಾಯ್, “ನಮ್ಮಗೌರವಾನ್ವಿತ ಪ್ರಧಾನಮಂತ್ರಿ ನಡೆಸಿಕೊಡುವ ಕಾರ್ಯಕ್ರಮವಾದ ಮನ್ಕಿಬಾತ್‌ನೊಂದಿಗೆ ಸಹಭಾಗಿಯಾಗಲು ನಾವು ಹೆಮ್ಮೆಪಡುತ್ತೇವೆ. ಕಾರ್ಯಕ್ರಮದ ಜನಪ್ರಿಯತೆ ಹೊಗಳಿಕೆಗೂ ಸಿಗದಷ್ಟು ಮೇಲಕ್ಕೇರಿದೆ. ನಮ್ಮ ಪ್ರಧಾನಿಯವರು ದೇಶದ ಧನಾತ್ಮಕತೆಗಳು, ಸಾಧನೆಗಳು ಮತ್ತು ಭವಿಷ್ಯದ ಗುರಿಗಳ ಬಗ್ಗೆ ಸಂಬಂಧಿಸಿದ ಸಮಸ್ಯೆಗಳು,

ಅವುಗಳಿಗೆ ಪರಿಹಾರಗಳು ಬಗ್ಗೆ ಮಾತನಾಡುತ್ತಾ, ಪ್ರೇಕ್ಷಕರು ತಮ್ಮ ಪ್ರೀತಿಯ ರಾಷ್ಟ್ರವು ಹೇಗೆ ಅಭಿವೃದ್ಧಿಹೊಂದುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. ನಮ್ಮ ವೇದಿಕೆಯೊಂದಿಗೆ ಮನ್ಕಿಬಾತ್ಅನ್ನು ಹೊಸ ಪ್ರೇಕ್ಷಕರ ತನಕ ಕೊಂಡೊಯ್ಯಲಿದ್ದೇವೆ. ಈಗಕೇವಲ ಒಂದು ಬಟನ್ ನಲ್ಲಿ ಕ್ಲಿಕ್ ಮಾಡುವ ಮೂಲಕ ಜನರು ಎಲ್ಲಿಂದಲಾದರೂ ಈಕಾರ್ಯಕ್ರಮವನ್ನುಆಲಿಸಬಹುದು’’ಎಂದರು.

 

Facebook Comments

Sri Raghav

Admin