ನಾಳೆ ಬೆಂಗಳೂರಿಗೆ ವಂಚಕ ಮನ್ಸೂರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.17- ಬಹುಕೋಟಿ ರೂ. ವಂಚನೆ ಪ್ರಕರಣದ ಆರೋಪಿ, ಐಎಂಎ ಮುಖ್ಯಸ್ಥ ಮಹಮ್ಮದ್ ಮನ್ಸೂರ್ ಖಾನ್‍ನನ್ನು ನಾಳೆ ಬೆಂಗಳೂರಿಗೆ ಕರೆತರಲಾಗುವುದು ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ನಮ್ಮ ಎಸ್‍ಐಟಿ ಹಾಗೂ ಇಡಿ ಅಧಿಕಾರಿಗಳ ತಂಡ ಜಂಟಿಯಾಗಿ ಇಂದು ಮುಂಜಾನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಮಹಮ್ಮದ್ ಮನ್ಸೂರ್‍ನನ್ನು ಬಂಧಿಸಿವೆ.

ಇಡಿ ಅಧಿಕಾರಿಗಳ ವಿಚಾರಣೆ ನಂತರ ಮಹಮ್ಮದ್ ಮನ್ಸೂರ್‍ನನ್ನು ಬೆಂಗಳೂರಿಗೆ ಕರೆತಂದು ಕೂಲಂಕಶವಾಗಿ ವಿಚಾರಣೆಗೊಳಪಡಿಸುತ್ತೇವೆ ಎಂದರು. ಬೆಂಗಳೂರು ನಗರದ ಪೊಲೀಸರು ತನಗೆ ಭದ್ರತೆ ಕೊಟ್ಟರೆ 24 ಗಂಟೆಯೊಳಗೆ ಭಾರತಕ್ಕೆ ಬರುವುದಾಗಿ ಮನ್ಸೂರ್‍ಖಾನ್ ಇತ್ತೀಚೆಗೆ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದನು.

ಈ ಬಗ್ಗೆ ನಮ್ಮ ಎಸ್‍ಐಟಿ ಅಧಿಕಾರಿಗಳು ಆತ ಭಾರತಕ್ಕೆ ಬರುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ರಾತ್ರಿ ದೆಹಲಿಗೆ ತೆರಳಿ ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

Facebook Comments