ಮಂತ್ರಾಲಯದಲ್ಲಿ ಸದ್ಯಕ್ಕಿಲ್ಲ ರಾಯರ ದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.15- ಮಂತ್ರಾಲಯ ಶ್ರೀ ಮಠ ಸದ್ಯಕ್ಕೆ ತೆರೆಯುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕೆಂದು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರು ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಎದುರಾಗಿದ್ದ ಲಾಕ್‍ಡೌನ್ ಮುಗಿದ ನಂತರ ಜೂ.15ರಿಂದ ರಾಯರ ದರ್ಶನ ಸಿಗಲಿದೆ ಎಂದು ತಿಳಿಸಲಾಗಿತ್ತು.

ಆದರೆ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರೆಯುತ್ತಿರುವುದರಿಂದ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು, ಮಠದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮಠ ತೆರೆಯುವ ದಿನಾಂಕವನ್ನು ಮುಂದೂಡಲಾಗಿದೆ ಎಂದು ಶ್ರೀ ಮಠದ ವ್ಯವಸ್ಥಾಪಕ ವೆಂಕಟೇಶ್ ಜೋಷಿ ತಿಳಿಸಿದ್ದಾರೆ.

ಮಠದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಧುನಾತನ ಪರಿಕರಗಳನ್ನು ಜೋಡಿಸುವ ಕಾರ್ಯ ಪ್ರಗತಿಯಲ್ಲಿರುವುದರಿಂದ ರಾಯರ ದರ್ಶನ ಮತ್ತಷ್ಟು ಸಮಯಾವಕಾಶ ಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮಠ ತೆರೆಯುವ ಬಗ್ಗೆ ಹಾಗೂ ಭಕ್ತಾದಿಗಳು ತೆಗೆದುಕೊಳ್ಳಬೇಕಾದ ಜಾಗೃತಾ ಕ್ರಮಗಳ ಬಗ್ಗೆ ಶ್ರೀ ಮಠದ ಅಂತರ್ಜಾಲ ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ತಿಳಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

Facebook Comments