ಜೂನಿಯರ್ ವಿಶ್ವಕಪ್ ಶೂಟಿಂಗ್‌ನಲ್ಲಿ ಭಾರತದ ಮನುಗೆ ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

ಪುಟಿಯಾನ್(ಚೀನಾ), ನ.21- ಜೂನಿಯರ್ ವಿಶ್ವಕಪ್ ಶೂಟಿಂಗ್ ಪಂದ್ಯಾವಳಿಯ ಮಹಿಳೆಯರ 10 ಮೀಟರ್ ಏರ್ ರೈಫಲ್ ಪಂದ್ಯದಲ್ಲಿ ಭಾರತದ ಹೆಮ್ಮೆಯ ಶೂಟರ್ ಮನು ಬಕೈರ್ ಬಂಗಾರದ ಸಾಧನೆ ಮಾಡಿದ್ದಾರೆ. ಚೀನಾದ ಪುಟಿಯಾನ್‍ನಲ್ಲಿ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್‍ಎಸ್‍ಎಫ್)ನ ಪ್ರತಿಷ್ಟಿತ ಪಂದ್ಯಾವಳಿಯಲ್ಲಿ ಮನು 244.7 ಅಂಕಗಳೊಂದಿಗೆ ಬಂಗಾರದ ಪದಕ ಗೆದ್ದರು.

ಸರ್ಬಿಯಾದ ಶೂಟರ್ ಜರೋನಾ ಅಗ್ರನೌವ್ ಕಂಚು (241.9) ಹಾಗೂ ಚೀನಾದ ಫಿನ್ ವಾಂಗ್ ಕಂಚು (221.9) ಪಥಗಳನ್ನು ಗೆದ್ದರು. ಭಾರತದ ಮತ್ತೊಬ್ಬ ಶೂಟರ್ ಯಶಸ್ವಿನಿ ಸಿಂಗ್ ದಸ್ವಾಲ್ 6ನೆ ಸ್ಥಾನ ಪಡೆದರು.

Facebook Comments