ಪಾಕಿಸ್ತಾನದಲ್ಲಿ ಮಾರ್ಬಲ್ ಗಣಿ ಕುಸಿತ, ಸತ್ತವರ ಸಂಖ್ಯೆ 28ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಪೇಷಾವರ್, ಸೆ.10- ಪಾಕಿಸ್ತಾನದ ಕೈಬರ್ ಫಶ್ತುನ್ ಕ್ವಾ ಪ್ರದೇಶದಲ್ಲಿ ಮಾರ್ಬಲ್ (ಅಮೃತ ಶಿಲೆ) ಗಣಿಗಳು ಕುಸಿದು ಸಂಭವಿಸಿದ ದುರಂತದಲ್ಲಿ ಸತ್ತವರ ಸಂಖ್ಯೆ 28ಕ್ಕೆ ಏರಿದೆ. ಈ ದುರ್ಘಟನೆಯಲ್ಲಿ ಅನೇಕ ಗಣಿ ಕಾರ್ಮಿಕರು ಗಾಯಗೊಂಡಿದ್ದು , 7 ಮಂದಿ ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪ್ರಾಂತ್ಯದ ರಾಜ್ಯಪಾಲರ ವಕ್ತಾರರೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿ ಪ್ರದೇಶದ ಸೈಜರತ್‍ಘರ್ ಪವರ್ತದ ತಪ್ಪಲಿನಲ್ಲಿರುವ 6 ಮಾರ್ಬಲ್ ಗಣಿಗಳು ಕುಸಿದು ಬಿತ್ತು. ಈ ದುರ್ಘಟನೆಯಲ್ಲಿ ಈವರೆಗೆ 28 ಮಂದಿ ಮೃತಪಟ್ಟಿದ್ದಾರೆ. ನಾಪತ್ತೆಯಾಗಿರುವ 7 ಕಾರ್ಮಿಕರಿಗಾಗಿ ಶೋಧ ಮುಂದುವರೆದಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದುರ್ಘಟನೆ ನಡೆದ ಸ್ಥಳವು ಕೈಬರ್ ಫಶ್ತುನ್ ಕ್ವಾ ರಾಜಧಾನಿ ಪೇಷಾವರ್‍ನಿಂದ 85 ಕಿ.ಮೀ ದೂರದಲ್ಲಿದೆ. ಮಾರ್ಬಲ್ ಗಣಿ ಚಟುವಟಿಕೆಗೆ ಅತ್ಯಂತ ಜನಪ್ರಿಯತೆ ಪಡೆದಿದ್ದ ಈ ಪ್ರದೇಶದಲ್ಲಿ ಮೊನ್ನೆ ರಾತ್ರಿ 6 ಗಣಿಗಳು ಹಠಾತ್ ಕುಸಿದವು.

Facebook Comments