ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊರ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಫೆ.14(ಪಿಟಿಐ)-ಭಾರತ ಪ್ರವಾಸದಲ್ಲಿರುವ ಪೋರ್ಚ್‍ಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೊಲೊ ಡಿ ಸೌಸಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಿದರು. ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಂಬಂಧ ಸುಧಾರಣೆಗಾಗಿ ಮೋದಿ ಮತ್ತು ಡಿ.ಸೌಸಾ ಸಮಾಲೋಚನೆ ನಡೆಸಿದರು.

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಪೋರ್ಚಗೀಸ್ ಅಧ್ಯಕ್ಷರಿಗೆ ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.  ಸಂಜೆ ಡಿಸೌಸಾ, ರಾಷ್ಟ್ರಪತಿ ರಾಮಾನಾಥ ಕೋವಿಂದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಪೋರ್ಚಗೀಸ್ ಅಧ್ಯಕ್ಷರ ಗೌರವಾರ್ಥಔತಣ ಕೂಟ ನಡೆಯಲಿದೆ. ನಾಳೆ ಅಧ್ಯಕ್ಷರು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

Facebook Comments