ಉದ್ಯಮಿಯನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.10- ಪಾಲನಹಳ್ಳಿ ಹೊರವಲಯದ ಬಳಿ  ವಾಟರ್ ಟ್ಯಾಂಕರ್ ಮಾಲೀಕನನ್ನು ಅಟ್ಟಾಡಿಸಿಕೊಂಡು ದುಷ್ಕರ್ಮಿ ಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಪಾಲನಹಳ್ಳಿ ನಿವಾಸಿ ಚನ್ನಕೇಶವ ಅಲಿಯಾಸ್ ಕೇಶವ(36) ಕೊಲೆಯಾದ ವಾಟರ್ ಟ್ಯಾಂಕರ್ ಮಾಲೀಕ.

ಚನ್ನಕೇಶವ ಅವರು ವಾಟರ್ ಟ್ಯಾಂಕರ್‍ಗಳನ್ನು ಇಟ್ಟುಕೊಂಡಿದ್ದು, ಜೊತೆಗೆ  ಬಿಸ್ನೆಸ್ ಮಾಡಿಕೊಂಡಿದ್ದರು. ರಾತ್ರಿ 10.30ರ ಸುಮಾರಿನಲ್ಲಿ ಪಾಲನಹಳ್ಳಿಯ ಹೊರವಲಯದ ಅಪಾರ್ಟ್ ಮೆಂಟ್‍ವೊಂದರ ಬಳಿ ತಮ್ಮ ಸಿಫ್ಟ್ ಕಾರಿನಲ್ಲಿ ಕುಳಿತುಕೊಂಡು ಕಬಾಬ್ ತಿನ್ನುತ್ತಾ ಮದ್ಯಪಾನ ಮಾಡುತ್ತಿದ್ದರು.  ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ದುಷ್ಕರ್ಮಿಗಳು ಕಾರಿನ ಗಾಜು ಒಡೆದು  ದಾಳಿ ಮಾಡಿದ್ದಾರೆ.

ತಕ್ಷಣ ಚೆನ್ನಕೇಶವ ಅವರು ತಪ್ಪಿಸಿಕೊಳ್ಳಲು ಕಾರಿನಿಂದ ಇಳಿದು ಓಡುತ್ತಿದ್ದಾಗ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ತಲೆ ಹಾಗೂ ದೇಹದ ಹಲವು ಕಡೆ ಹಲ್ಲೆ ನಡೆಸಿ  ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.  ಸುದ್ದಿ ತಿಳಿದ ಯಲಹಂಕ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇಡಲಾಗಿದೆ.

# ದ್ವೇಷ ಕಾರಣವೇ: 
ವಾಟರ್ ಟ್ಯಾಂಕರ್ ಅಪಘಾತಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವಾರದ ಹಿಂದೆ ಅದೇ ಗ್ರಾಮದ ಯುವಕರಿಗೂ ಹಾಗೂ ಚನ್ನಕೇಶವ ನಡುವೆ ಜಗಳ ನಡೆದಿತ್ತು. ಆ ಸಂದರ್ಭದಲ್ಲಿ ಊರಿನ ಹಿರಿಯರು ಮಧ್ಯಸ್ಥಿಕೆ ವಹಿಸಿ ಇಬ್ಬರಿಗೂ ರಾಜಿ ಪಂಚಾಯ್ತಿ ಮಾಡಿ ಕಳುಹಿಸಿದ್ದರು.

ಆದರೆ  ರಾತ್ರಿ ಚನ್ನಕೇಶವ ಅವರ ಕೊಲೆಯಾಗಿದ್ದು, ಬಹುಶಃ ಈ ದ್ವೇಷದಿಂದ ಕೊಲೆ ಮಾಡಿರಬಹುದೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲೂ ಸಹ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.

Facebook Comments