‘ಸೋನಿಯಾ ಸತ್ತ ಇಲಿ’ ಎಂದ ಕಟ್ಟರ್ ಕ್ಷಮೆ ಯಾಚನೆಗೆ ಕಾಂಗ್ರೆಸ್ ಬಿಗಿಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

ಚಂಢಿಘರ್,ಅ.14- ಮತ್ತೆ ಎಐಸಿಸಿ ಅಧ್ಯಕ್ಷೆಯಾದ ಸೋನಿಯಾ ಗಾಂಧಿ ವಿರುದ್ಧ ಕಟುವಾದ ವ್ಯಂಗ್ಯ ಹೇಳಿಕೆ ನೀಡಿರುವ ಹರಿಯಾಣದ ಮುಖ್ಯಮಂತ್ರಿ ಲಾಲ್ ಮನೋಹರ್ ಕಟ್ಟರ್ ವಿರುದ್ಧ ಕಾಂಗ್ರೆಸ್ ಭಾರೀ ಆಕ್ರೋಶ ವ್ಯಕ್ತಪಡಿಸಿದೆ.

ನಿನ್ನೆಯಷ್ಟೇ ಹರಿಯಾಣ ಮುಖ್ಯಮಂತ್ರಿ ಲಾಲ್ ಮನೋಹರ್ ಕಟ್ಟರ್, ಸೋನಿಯಾಗಾಂಧಿಯವರು ಮತ್ತೆ ಎಐಸಿಸಿಯ ಅಧ್ಯಕ್ಷೆಯಾಗಿರುವುದಕ್ಕೆ ಪ್ರತಿಕ್ರಿಯಿಸಿ, ಪರಿವಾರ ರಾಜಕಾರಣದಿಂದ ದೂರವಿರುವುದು ಉತ್ತಮ.

ಆದರೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಮೂರು ತಿಂಗಳು ದೇಶವೆಲ್ಲ ಸುತ್ತಿದರೂ ಯಾವೊಬ್ಬರೂ ಸಿಗಲಿಲ್ಲವೇ? ಮೂರು ತಿಂಗಳ ನಂತರ ಈಗ ಅಧ್ಯಕ್ಷರು ಯಾರಾಗಿದ್ದಾರೆ?! ಎಂದು ಪ್ರಶ್ನಿಸಿ ಕೋಡ ಪಹರ್ ನಿಕ್ಲಿ ಚುಹಿಯ, ವೋ ಬಿ ಮರಿ ಹ್ಯುಯಿ(ಬೆಟ್ಟ ಅಗೆದು ಇಲಿ ಹುಡುಕಿದರು . ಆದರೆ ಆ ಇಲಿಯೂ ಸತ್ತಿದೆ) ಎಂದು ಟ್ವಿಟ್‍ನಲ್ಲಿ ವ್ಯಂಗ್ಯವಾಡಿದ್ದಾರೆ.

ಸೋನಿಯಾ ಗಾಂಧಿ ಅವರನ್ನು ಸತ್ತ ಇಲಿ ಎಂದು ಹೇಳಿರುವುದನ್ನು ಖಂಡಿಸಿರುವ ಕಾಂಗ್ರೆಸ್, ಇದು ಬಿಜೆಪಿಯ ಮಹಿಳಾ ವಿರೋಧಿ ನೀತಿಯಾಗಿದೆ. ಕೀಳುದರ್ಜೆಯ ರಾಜಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕಟ್ಟರ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ದೆಹಲಿ ಮಹಿಳಾ ಕಾಂಗ್ರೆಸ್‍ನ ಮುಖ್ಯಸ್ಥೆ ಶುಸ್ಮಿತಾ ದೇವ್, ನಾಚಿಕೆಗೇಡು ಮತ್ತು ಬಿಜೆಪಿ ಪಕ್ಷದ ತುಂಬ ಮಹಿಳೆಯರನ್ನು ತುಂಬ ಕೀಳಾಗಿ ಕಾಣುವವರು ತುಂಬಿದ್ದಾರೆ ಎಂಬುದು ಖಚಿತಪಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಲಾಲ್ ಮನೋಹರ್ ಕಟ್ಟರ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ತನ್ನ ಕಚೇರಿಯಿಂದ ಬಿಜೆಪಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.

Facebook Comments

Sri Raghav

Admin