ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ : ನಾಳೆ ಪ್ರಧಾನಿ ಮೋದಿ ಉದ್ಘಾಟನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.1 (ಪಿಟಿಐ)- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳವಾರ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ- 2021 ಅನ್ನು ಉದ್ಘಾಟಿಸಲಿದ್ದಾರೆ ಎಂದು ಪಿಎಂ ಸಚಿವಾಲಯ ತಿಳಿಸಿದೆ. ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಆಯೋಜಿಸಿರುವ ಈ ಮ್ಯಾರಿಟೈಮ್ ಇಂಡಿಯಾ ಸಮ್ಮಿಟ್ ಮಾ.2 ರಿಂದ 4ನೇ ತಾರೀಖಿನವರೆಗೆ ನಡೆಯಲಿದೆ.

ವರ್ಚುವಲ್ ವೇದಿಕೆಯಲ್ಲಿ ನಡೆಯಲಿರುವ ಶೃಂಗಸಭೆಯು ಮುಂದಿನ ದಶಕದಲ್ಲಿ ಭಾರತದ ಕಡಲ ಕ್ಷೇತ್ರಕ್ಕೆ ಮಾರ್ಗಸೂಚಿಯನ್ನು ತೋರಿಸಲಿದ್ದು, ಜಾಗತಿಕ ಕಡಲ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಗೆ ತರಲು ಕೆಲಸ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಹಲವು ದೇಶಗಳ ಖ್ಯಾತ ಭಾಷಣಕಾರರು ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾರತೀಯ ಸಾಗರ ಕ್ಷೇತ್ರದಲ್ಲಿ ವ್ಯಾಪಾರ ಅವಕಾಶಗಳು ಮತ್ತು ಹೂಡಿಕೆಗಳನ್ನು ನಿರೀಕ್ಷಿಸಬಹುದು. ಈ ಮೂರು ದಿನಗಳ ಶೃಂಗಸಭೆಯಲ್ಲಿ ಡೆನ್ಮಾರ್ಕ್ ದೇಶ ಪಾಲುದಾರನಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.

Facebook Comments