ಐಪಿಎಲ್ ಮಿನಿಹರಾಜು : ವುಡ್ ಔಟ್, ರಹೀಮ್ ಇನ್

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಫೆ.18- ಐಪಿಎಲ್ ಮಿನಿಹರಾಜಿಗೆ ಕ್ಷಣಗಣನೆ ಶುರುವಾಗಿರುವಾಗಲೇ ಮಹತ್ತರ ಬೆಳವಣಿಗೆಯೊಂದು ನಡೆದಿದೆ. ಇಂಗ್ಲೆಂಡ್‍ನ ಖ್ಯಾತ ವೇಗಿ ಮಾರ್ಕ್ ವುಡ್ ಅವರು ಈ ಬಾರಿಯ ಬಿಡ್ಡಿಂಗ್‍ನಲ್ಲಿ ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ. ಘೋಷಿಸಿಕೊಂಡಿದ್ದರಾದರೂ ಬಿಡ್ಡಿಂಗ್ ನಡೆಯುವ ಕೆಲವೇ ಗಂಟೆಗಳಲ್ಲಿ ಈ ಬಾರಿಯ ಮಿನಿಹರಾಜಿನಿಂದ ಹೊರಗುಳಿದಿದ್ದಾರೆ.
ಕುಟುಂಬದವರೊಂದಿಗೆ ಕಾಲ ಕಳೆಯಬೇಕೆಂಬ ದೃಷ್ಟಿಯಿಂದ ಮಾರ್ಕ್ ಉಡ್ ಮಿನಿ ಹರಾಜಿನಿಂದ ಹೊರಗುಳಿದ ಕೆಲವೇ ಗಂಟೆಗಳಲ್ಲಿ ಬಾಂಗ್ಲಾದೇಶದ ವಿಕೆಟ್ ಕೀಪರ್ ಮುಸ್ತಾಫಿರ್ ರಹೀಂ ಅವರು ಬಿಡ್ಡಿಂಗ್‍ಗೆ ಲಭ್ಯವಾಗಿದ್ದಾರೆ.

ಐಪಿಎಲ್ ಆವೃತ್ತಿ ಆರಂಭವಾದಾಗಿನಿಂದಲೂ ರಹೀಂ ಅವರು ಬಿಡ್ಡಿಂಗ್‍ನಲ್ಲಿ ತಮ್ಮ ಹೆಸರನ್ನು ನೋಂದಾಯಿಸುತ್ತ ಬಂದಿದ್ದರಾದರೂ ಒಂದು ಬಾರಿಯೂ ಯಾವ ತಂಡಕ್ಕೂ ಸೇಲ್ ಆಗಿರಲಿಲ್ಲ. ಈ ಬಾರಿಯೂ ಅವರು ಮಿನಿ ಹರಾಜಿನಲ್ಲಿ ಪಾಲ್ಗೊಂಡಿದ್ದು ಐಪಿಎಲ್ 14ರ ಬಿಡ್ಡಿಂಗ್‍ನಲ್ಲಾದರೂ ಅವರಿಗೆ ಅದೃಷ್ಟ ಲಭಿಸುವುದೇ ಎಂಬುದನ್ನು ಕಾದು ನೋಡಬೇಕು.
33 ವರ್ಷದ ರಹೀಮ್ ಅವರು ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್‍ನಲ್ಲಿ 85 ಪಂದ್ಯಗಳಿಂದ 15 ಅರ್ಧಶತಕಗಳ ನೆರವಿನಿಂದ 2274 ರನ್ ಗಳಿಸಿದ್ದರೆ, ಟ್ವೆಂಟಿ-20 ಮಾದರಿಯಲ್ಲಿ
127.96 ಸ್ಟ್ರೈಕ್‍ರೇಟ್‍ನಡಿ 4288 ರನ್ ಗಳಿಸಿದ್ದರೂ ಅವರಿಗೆ ಐಪಿಎಲ್ ಆಡಲು ಅವಕಾಶ ಸಿಕ್ಕಿಲ್ಲ.

ಐಪಿಎಲ್ ಬಾಂಗ್ಲಾದೇಶದ ಅಬ್ದುಲ್ ರಜಾಕ್, ಶಕೀಬ್ ಅಲ್ ಹಸನ್, ಮೊಹಮ್ಮದ್ ಅಶ್ರಫುಲ್, ಮಶ್ರಾಫೆ ಮೊರ್ಟಾಜಾರು ವಿವಿಧ ತಂಡಗಳ ಪರ ಆಡಿದ್ದು ಈಗ ರಹೀಂ ಅವರು ಐಪಿಎಲ್ ಆಡಲು ಕಾತರದಿದ್ದು ಯಾವ ತಂಡದ ಪಾಲಾಗುತ್ತಾರೆ ಅಥವಾ ಈ ಬಾರಿಯೂ ಬಿಕರಿಯಾಗದೆ ಉಳಿಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.

Facebook Comments