ಕೊರೊನಾ ಕರಿನೆರಳಲ್ಲೇ ನೆರವೇರಿದ ಸರಳ ವಿವಾಹ..!

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ಏ.12- ಕೊರೊನಾ ಮಹಾಮಾರಿಯ ಕರಾಳ ಮುಖ ದರ್ಶನದಿಂದ ಈಗಾಗಲೇ ಜನಜೀವನ ಅಸ್ತವ್ಯಸ್ತಗೊಂಡಿರುವದಲ್ಲದೆ ಪೂರ್ವನಿಗದಿತ ಸಭೆ ಸಮಾರಂಭಗಳು ಹಾಗೂ ಮಂಗಳ ಕಾರ್ಯಗಳ ಮೇಲೂ ಕರಾಳ ನೆರಳು ಆವರಿಸಿದೆ.

ಮಂಗಳವಾದ್ಯ ಸಮೇತ ಮಂತ್ರೋಪದೇಶ ದೊಂದಿಗೆ ಬಂಧು ಬಾಂಧವರು ಸಡಗರ ಸಂಭ್ರಮದಿಂದ ನಡೆಯಬೇಕಾದ ವಿವಾಹ ಮಹೋತ್ಸವ ಸಮಾರಂಭಗಳು ಸಹ ಕೊರೊನಾ ಎಂಬ ಮಹಾಮಾರಿಯ ವಕ್ರ ದೃಷ್ಟಿಯಿಂದಾಗಿ ಕಳೆಗುಂದುವಂತಾಗಿದೆ.

ಗುರು ಹಿರಿಯರು ಬಂಧು ಬಾಂಧವರು ನೆರೆಹೊರೆ ಯವರ ಸಮ್ಮುಖದಲ್ಲಿ ಗೃಹಸ್ಥಾಶ್ರಮ ಪ್ರವೇಶಿಸುವ ಕನಸು ಕಂಡಿದ್ದ ನಗರದ ವಾಸಿ ಎಲೆ ಜಯಣ್ಣ ಅವರ ಪುತ್ರಿ ದೀಪಾ (ರೋಹಿಣಿ ) ಕಡೂರಿನ ದ್ರಾಕ್ಷಾಯಿಣಿ ಶಿವಕುಮಾರ್ ಅವರ ಪುತ್ರ ವಿನಯ್ ಅವರನ್ನು ವರಿಸುವ ಮೂಲಕ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು.

ಒಂದೆರಡು ನಿಮಿಷದಲ್ಲಿ ನಡೆದ ಈ ಅಪರೂಪದ ಸರಳ ವಿವಾಹ ಮಹೋತ್ಸವಕ್ಕೆ ಕೇವಲ ವಧು ಮತ್ತು ವರನ ಕುಟುಂಬ ಸದಸ್ಯರಷ್ಟೇ ಸಾಕ್ಷಿಯಾದರು.

Facebook Comments

Sri Raghav

Admin