ಲಾಕ್ ಡೌನ್ ಪರಿಣಾಮ: ಆಕಾಶದಲ್ಲೇ ಹಸೆಮಣೆ ಏರಿದ ನವಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

ಮಧುರೈ, ಮೇ 24- ಕೊರೊನಾ ಲಾಕ್ ಡೌನ್ ನಿಂದಾಗಿ ಮದುವೆ ಸಮಾರಂಭಗಳಿಗೆ ಸರ್ಕಾರಗಳು ನಿರ್ಬಂಧ ಹೇರಿರುವುದರಿಂದ ನೂತನ ಜೋಡಿ ಒಂದು ಆಕಾಶದಲ್ಲೇ ಹಸೆಮಣೆ ಏರಿದ್ದಾರೆ. ರಾಕೇಶ್ ಹಾಗೂ ದೀಕ್ಷಣಾ ಎಂಬುವವರೇ ಹಸೆಮಣೆ ಏರಿದ ನವಜೋಡಿ.

ಮಧುರೈ ಮತ್ತು ತುತುಕುಡಿ ನಡುವೆ ವಿಮಾನವೊಂದರಲ್ಲಿ ಇವರ ಮದುವೆ ಸಮಾರಂಭ ನೆರವೇರಿದ್ದು ಕುಟುಂಬ ಸ್ಥರು ಮತ್ತು ಸ್ನೇಹಿತರು ಸೇರಿದಂತೆ 130 ಅತಿಥಿ ಗಳ ನಡುವೆ ರಾಕೇಶ್ ಹಾಗೂ ದೀಕ್ಷಣಾ ಹೊಸ ಜೀವನಕ್ಕೆ ಕಾಲಿಟ್ಟಿದ್ದು ಆ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಮಾನದಲ್ಲಿ ಹಮ್ಮಿಕೊಂಡಿದ್ದ ವಿಭಿನ್ನ ರೀತಿಯ ಮದುವೆಗೆ ಒಪ್ಪಿಗೆ ಕೊಡುವ ಮುನ್ನ ಎಲ್ಲರಿಗೂ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಿದ್ದು, ನೆಗೆಟಿವ್ ವರದಿ ಬಂದಿದ್ದರಿಂದ ವಿವಾಹ ನಡೆಸಲು ಸಮ್ಮತಿ ನೀಡಲಾಗಿತ್ತು.

ತಮಿಳುನಾಡಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವುದರಿಂದ ಮಾರ್ಚ್ 31ರವರೆಗೂ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ರಾಕೇಶ್ ಹಾಗೂ ದೀಕ್ಷಣಾ ಅವರು ಗಗನದಲ್ಲೇ ಹಸೆಮಣೆ ಏರುವ ಮೂಲಕ ತಮ್ಮ ವಿವಾಹವನ್ನು ಸ್ಮರಣೀಯವಾಗಿಸಿ ಕೊಳ್ಳಲು ಈ ರೀತಿಯ ಉಪಾಯ ಮಾಡಿದ್ದರು.

Facebook Comments