ಬೆಂಗಳೂರಿನಲ್ಲಿ ಪರ್ಯಾಯ ಪೊಲೀಸರಾದ ಮಾರ್ಷಲ್‍ಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ಬಿಬಿಎಂಪಿ ಮಾರ್ಷಲ್‍ಗಳನ್ನು ನಗರದ ವ್ಯಾಪ್ತಿಯಲ್ಲಿ ಪರ್ಯಾಯ ಪೊಲೀಸರಂತೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗುವಂತೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ತೆರವಿಗೂ ಬಳಸಿಕೊಳ್ಳಲಾಗಿದೆ.  ಶಿವಾಜಿನಗರ ವಿಭಾಗದ ಭಾರತೀನಗರ ವಾರ್ಡ್ 91ರ ವ್ಯಾಪ್ತಿಯ ರಸಲ್ ಮಾರುಕಟ್ಟೆಯಲ್ಲಿ ಟೊಮೊಟೋ ವ್ಯಾಪಾರಿಗಳು ರಸ್ತೆಯನ್ನು ಆಕ್ರಮಿಸಿ ಕ್ರೇಟ್‍ಗಳನ್ನು ಇಟ್ಟಿದ್ದರು. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು.

ಬಹಳ ದಿನಗಳಿಂದ ಈ ಸಮಸ್ಯೆ ಇತ್ತು. ವಾಹನ ಸವಾರರು ಸ್ಥಳೀಯ ವ್ಯಾಪಾರಿಗಳಿಗೆ ತಿಳುವಳಿಕೆ ಹೇಳಲು ಹೋದಾಗ ಸಂಘರ್ಷಗಳಾಗುತ್ತಿತ್ತು.
ಇಂದು ಬೆಳಗ್ಗೆ ಬಿಬಿಎಂಪಿ ಮಾರ್ಷಲ್‍ಗಳು ಸ್ಥಳಕ್ಕೆ ಬಂದು ವ್ಯಾಪಾರಿಗಳಿಗೆ ತಿಳುವಳಿಕೆ ಹೇಳಿದರು. ರಸ್ತೆಯ ಜಾಗವನ್ನು ಅತಿಕ್ರಮಿಸಿ ಸಂಚಾರಕ್ಕೆ ಅಡಚಣೆ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ರಸ್ತೆ ಮಧ್ಯ ಭಾಗದವರೆಗೂ ಹಾಕಲಾಗಿದ್ದ ಕ್ರೇಟ್‍ಗಳನ್ನು ತೆರವುಗೊಳಿಸಿ ರಸ್ತೆ ಬದಿಗೆ ಹಾಕಿಸಿದ್ದಾರೆ. ಇದರಿಂದ ಸಂಚಾರ ವ್ಯವಸ್ಥೆ ಸುಗಮವಾಗಿದೆ.
ದಿನೇ ದಿನೇ ಬೆಂಗಳೂರಿನಲ್ಲಿ ಮಾರ್ಷೆಲ್‍ಗಳ ಕಾರ್ಯ ವ್ಯಾಪ್ತಿ ವಿಸ್ತರಣೆಯಾಗುತ್ತಿದೆ. ಕೊರೊನಾ ಸೋಂಕು ನಿಯಂತ್ರಿಸಲು ಸಾರ್ವಜನಿಕರ ನಡುವೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದನ್ನು ನಿಗಾ ವಹಿಸಲು ಬಿಬಿಎಂಪಿ ಹೆಚ್ಚುವರಿ ಮಾರ್ಷಲ್‍ಳನ್ನು ನೇಮಿಸಿಕೊಂಡಿತ್ತು.

ಹಂತ ಹಂತಾಗಿ ಮಾರ್ಷಲ್‍ಗಳನ್ನು ಕಸ ನಿರ್ವಹಣೆಯ ಕೆಲಸಕ್ಕೆ ನಿಯೋಜಿಸಲಾಗಿತ್ತು. ಸರಿಯಾಗಿ ಕಸ ವಿಂಗಡನೆ ಮಾಡದ ಸಾರ್ವಜನಿಕರಿಗೆ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಮಾರ್ಷಲ್‍ಗಳು ದಂಡ ವಿಸಿದರು. ರಸ್ತೆ ಬದಿಯಲ್ಲಿ ಕಸ ಎಸೆಯುವವರ ಮತ್ತು ಅನೈರ್ಮಲ್ಯ ಮಾಡುವವರ ವಿರುದ್ಧ ಮಾರ್ಷಲ್‍ಗಳು ದಂಡ ಪ್ರಯೋಗ ಮಾಡಿದರು. ಬಿತ್ತಿ ಪತ್ರ ಅಂಟಿಸಿ ನಗರದ ಸೌಂದರ್ಯ ಹಾಳು ಮಾಡುವವರ ವಿರುದ್ಧವೂ ಕಾರ್ಯಾಚರಣೆ ನಡೆಸಿದರು.

ಸಂಚಾರ ಸುವ್ಯಸ್ಥೆ ಹಾಗೂ ಒತ್ತುವರಿ ತೆರವಿನಂತಹ ಕೆಲಸಗಳಿಗೂ ಈಗ ಮಾರ್ಷಲ್‍ಗಳನ್ನು ಇಳಿಸಲಾಗಿದೆ. ಇನ್ನು ಮುಂದೆ ಮತ್ತಷ್ಟು ಕೆಲಸಗಳಿಗೂ ಮಾರ್ಷಲ್‍ಗಳನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಪೆÇಲೀಸರ ಮೇಲಿದ್ದ ಕಾರ್ಯದೊತ್ತಡ ಕಡಿಮೆಯಾಗುವ ನಿರೀಕ್ಷೆಗಳಿವೆ.

Facebook Comments