ಮಕ್ಕಳ ಆತ್ಮರಕ್ಷಣೆಗೆ ಮಾರ್ಷಲ್ ಆಟ್ರ್ಸ್ ಪಾಠ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಮಾ.1- ಮಕ್ಕಳು ಶಾಲೆಯಲ್ಲಿ ಕಿರುಕುಳ ಅನುಭವಿಸುತ್ತಾರೆ, ಪ್ರತಿ ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬರು ತಿಂಗಳಿಗೆ ಕನಿಷ್ಠ ಒಂದು ಬಾರಿ ದಾಳಿಗೆ ಒಳಗಾಗುತ್ತಾರೆ. ನವೆಂಬರ್ 2020ರಲ್ಲಿ ಶಾಲೆಯಲ್ಲಿ ಹಿಂಸೆ ಹಾಗೂ ಕಿರುಕುಳದ ವಿರುದ್ಧಅಂತಾರಾಷ್ಟ್ರೀಯ ದಿನವನ್ನು ಆಚರಿಸಲು ವಿಶ್ವಸಂಸ್ಥೆ ನೇತೃತ್ವದಲ್ಲಿ ಜಾಗತಿಕ ಅರಿವನ್ನು ಮೂಡಿಸಲು ಯುನೆಸ್ಕೋ ಈ ವಾಸ್ತವಾಂಶ ಪತ್ತೆ ಮಾಡಿದೆ.

ಭಾರತದಲ್ಲಿಯೂ ಸನ್ನಿವೇಶ ಭಿನ್ನವಾಗಿಲ್ಲ. ಈ ಸಮಸ್ಯೆ ಎದುರಿಸಲು ಟೈಗರ್ ಕ್ರಂಚ್ ಮಾರ್ಷಲ್ ಆಟ್ರ್ಸ್ ಮೂಲಕ ಮಕ್ಕಳಿಗೆ ಆತ್ಮರಕ್ಷಣೆಯನ್ನು ಕಲಿಸುವ ಪ್ರಾಮುಖ್ಯತೆ ಅರ್ಥ ಮಾಡಿಕೊಂಡಿದ್ದು, ಮಕ್ಕಳು ಮಾನಸಿಕ ಮತ್ತು ದೈಹಿಕ ಸಾಮಥ್ರ್ಯ ಹೆಚ್ಚಿಸುವುದು ಅಲ್ಲದೆ ಸಂಘರ್ಷದ ಸನ್ನಿವೇಶಗಳನ್ನು ಎದುರಿಸಲು ಶಕ್ತಿ ನೀಡುತ್ತದೆ.

ಬ್ರಿಟಾನಿಯಾ ಟೈಗರ್ ಕ್ರಂಚ್ ಖಾವೊ, ಪಂಚ್ ದಿಖಾವೊ ಅಭಿಯಾನದ ಬಾಲಿವುಡ್ ನಟ ಸೋನು ಸೂದ್ ಪ್ರಚಾರ ರಾಯಭಾರಿಯಾಗಿದ್ದು ಮಕ್ಕಳನ್ನು ವಿಶ್ವದಾದ್ಯಂತ ವರ್ಚುಯಲ್ ಪ್ರವಾಸ ಕೊಂಡೊಯ್ದು ಅವರನ್ನು 5 ವಿವಿಧ ಬಗೆಯ ಮಾರ್ಷಲ್ ಆಟ್ರ್ಸ್ ಪರಿಚಯಿಸುತ್ತಾರೆ ಎಂದು ಬ್ರಿಟಾನಿಯಾ ಸಂಸ್ಥೆಯ ವಿನಯ್ ಸುಬ್ರಮಣ್ಯಂ ತಿಳಿಸಿದರು.

Facebook Comments