ಟೋಕಿಯೋ ಒಲಿಂಪಿಕ್ ಬಾಕ್ಸಿಂಗ್ ರಾಯಭಾರಿಗಳ ಸಮೂಹದಲ್ಲಿ ಮೇರಿಗೆ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.31- ಮುಂದಿನ ವರ್ಷ ಟೋಕಿಯೋದಲ್ಲಿ ನಡೆಯಲಿರುವ ಪ್ರತಿಷ್ಠಿತ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್-ಅಥ್ಲೆಟಿಕ್ಸ್ ರಾಯಭಾರಿಗಳ ಹತ್ತು ಜನರ ಸಮೂಹದಲ್ಲಿ ಭಾರತದ ಹೆಮ್ಮೆಯ ಬಾಕ್ಸರ್ ಎಂ.ಸಿ.ಮೇರಿಕೋಮ್ ಅವರಿಗೆ ಸ್ಥಾನ ಲಭಿಸಿದೆ.

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಆಯ್ಕೆ ಮಾಡಿರುವ ಹತ್ತು ಬಾಕ್ಸಿಂಗ್ ಅಥ್ಲೆಟಿಕ್ ಅಂಬಾಸಿಡರ್‍ಗಳ ಗ್ರೂಪ್‍ನಲ್ಲಿ ಆರು ಬಾರಿ ವಿಶ್ವಚಾಂಪಿಯನ್ ಆಗಿರುವ ಮೇರಿ ಕೋಮ್ ಅವರೂ ಸಹ ರಾಯಭಾರಿಯಾಗಿ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಏಷ್ಯಾ ವಿಭಾಗದಿಂದ ಪ್ರತಿನಿಧಿಸಲಿದ್ದಾರೆ.

ಮಣಿಪುರದ 36 ವರ್ಷದ ಮ್ಯಾಜಿಕ್ ಮೇರಿ ಅವರಿಗೆ ಟೋಕಿಯೋ ಒಲಿಂಪಿಕ್ -2020 ಕ್ರೀಡಾಕೂಟದಲ್ಲಿ ಈ ಗೌರವ ಲಭಿಸಿರುವುದು ಭಾರತದ ಬಾಕ್ಸಿಂಗ್ ಕ್ಷೇತ್ರಕ್ಕೆ ಮತ್ತು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.

ವಿಶ್ವ ಬಾಕ್ಸಿಂಗ್‍ನಲ್ಲಿ ಅತ್ಯಂತ ಯಶಸ್ವಿ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಗೆ ಪಾತ್ರರಾಗಿರುವ ಮೇರಿ ಕೋಮ್ ಅವರನ್ನು ಒಲಿಂಪಿಕ್ಸ್‍ನಲ್ಲಿ ಅಥ್ಲೆಟಿಕ್ ರಾಯಭಾರಿಗಳ ಹತ್ತು ಸದಸ್ಯರ ತಂಡದಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಐಒಸಿ ಪ್ರಕಟಣೆ ತಿಳಿಸಿದೆ.

Facebook Comments