ವಿಶ್ವ ಮಹಿಳಾ ಬಾಕ್ಸಿಂಗ್ : ಮೇರಿ ಕೋಮ್‌ಗೆ ಮತ್ತೊಂದು ಪದಕ ಫಿಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಉಲಾನ್-ಉಡೇ(ರಷ್ಯಾ), ಅ.10-ಆರು ಬಾರಿ ಚಾಂಪಿಯನ್ ಆಗಿರುವ ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ (51 ಕೆಜಿ ಭಾಗ) ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ಧಾರೆ. ಇದರೊಂದಿಗೆ ಅವರು ಎಂಟನೇ ಪದಕದ ಗೆಲ್ಲುವುದು ಖಚಿತವಾಗಿದೆ.

ಕೊಲಂಬಿಯಾದ ಪ್ರಬಲ ಎದುರಾಳಿ ವ್ಯಾಲೆನ್ಸಿಯಾ ವಿಕ್ಟೋರಿಯಾ ಅವರನ್ನು ಮಣಿಸಿ ಮ್ಯಾಗ್ನಿಫಿಯಂಟ್ ಮೇರಿ, ಉಪಾಂತ್ಯ ತಲುಪಿ ಮತ್ತೊಂದು ಪದಕ ಕೊರಳಿಗೇರಿಸಲು ಸಜ್ಜಾಗಿದ್ದಾರೆ  ರಷ್ಯಾದ ಉಲಾನ್-ಉಡೇಯಲ್ಲಿ ನಡೆದ ಕೊನೆ 8ನೇ ಹಂತದ ಸ್ಪರ್ಧೆಯಲ್ಲಿ ಮೇರಿ, ವಿಕ್ಟೋರಿಯಾ ವಿರುದ್ಧ 5-0 ನಿರಾಯಾಸ ಜಯ ದಾಖಲಿಸಿ ಸೆಮಿಫೈನಲ್‍ಗೆ ಎಂಟ್ರಿಯಾಗಿದ್ದಾರೆ.

ಈ ಮೂಲಕ ಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬಾಕ್ಸರ್ ಎಂಬ ತಮ್ಮದೇ ಆದ ದಾಖಲೆಯನ್ನು ಕೋಮ್ ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಮೇರಿ ಕೋಮ್ ಈಗಾಗಲೇ ಆರು ಚಿನ್ನ ಮತ್ತು ಒಂದು ರಜತ ಪದಕ ಗೆದ್ದಿದ್ದಾರೆ. ಆದರೆ 51 ಕೆಜಿ ಭಾಗದಲ್ಲಿ ಇದು ಮಣಿಪುರದ ಬಾಕ್ಸರ್‍ಗೆ ಚೊಚ್ಚಲ ಪದಕವಾಗಿದೆ. ಕ್ವಾರ್ಟರ್ ಫೈನಲ್‍ನಲ್ಲಿ ಗೆದ್ದು ಉಪಾಂತ್ಯ ತಲುಪಿದಾಗಲೇ ವಿಶ್ವ ಮಹಿಳಾ ಬಾಕ್ಸಿಂಗ್‍ನಲ್ಲಿ ಮೇರಿ ಮತ್ತೊಂದು ಪದಕ ಕೊರಳಿಗೇರಿಸುವುದನ್ನು ದೃಢಪಡಿಸಿದ್ದರು.

ಭಾರತದ ಬಾಕ್ಸಿಂಗ್ ಧ್ರುವತಾರೆ, ಒಲಿಂಪಿಕ್ಸ್ ಕಂಚು ಪದಕ (2012), ಏಷ್ಯನ್ ಕ್ರೀಡಾಕೂಟ ಮತ್ತು ಕಾಮನ್‍ವೆಲ್ತ್ ಗೇಮ್‍ಗಳಲ್ಲಿ ಐದು ಟೈಟಲ್‍ಗಳು, ಸ್ವರ್ಣ ಪದಕಗಳಲ್ಲದೇ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ.

Facebook Comments