ಬೆಂಗಳೂರಿಗರೇ ಹುಷಾರ್, ಮಾಸ್ಕ್ ಇಲ್ಲದೆ ಹೊರಬಂದರೆ ದಂಡ ಫಿಕ್ಸ್..!
ಬೆಂಗಳೂರು,ಜ.20-ದಿನೇ ದಿನೇ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ನಗರದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮಾಸ್ಕ್ ಇಲ್ಲದೆ ನೀವು ಬೀದಿಗಿಳಿದರೆ ದಂಡ ಪಾವತಿಸಬೇಕಾಗುತ್ತದೆ. ಇರಲಿ ಎಚ್ಚರ..
ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆತು ಕೊರೊನಾ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಲು ಮಾರ್ಷಲ್ಗಳಿಗೆ ಸೂಚಿಸಲಾಗಿದೆ.ಮೇಲಾಕಾರಿಗಳ ಅದೇಶದ ಮೇರೆಗೆ ಇಂದಿನಿಂದಲೇ ಮಾರ್ಷಲ್ಗಳು ನಗರದೆಲ್ಲೆಡೆ ಸಂಚರಿಸುತ್ತ ಕೊರೊನಾ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನಕಣ್ಣಿಟ್ಟಿದ್ದಾರೆ.
ಹೀಗಾಗಿ ಯಾರೇ ಆಗಲಿ ಮನೆಯಿಂದ ಹೊರ ಹೋಗುವ ಮುನ್ನ ಮಾಸ್ಕ್ ಧರಿಸಿರುವುದನ್ನು ಖಾತರಿಪಡಿಸಿಕೊಂಡ ನಂತರವೇ ಹೊರ ಹೋಗಿ. ಹೊರ ಹೋದರೂ ಜನಸಂದಣಿ ಪ್ರದೇಶದಿಂದ ಅಂತರ ಕಾಪಾಡಿಕೊಳ್ಳುವುದು ಸೂಕ್ತ.
ಮಾರುಕಟ್ಟೆಗಳು, ಸಿಗ್ನಲ್ಗಳು, ಚಿತ್ರಮಂದಿರಗಳು, ಮಾಲ್ಗಳು, ಬಸ್ನಿಲ್ದಾಣ, ರೈಲು ನಿಲ್ದಾಣ, ಸರ್ಕಲ್ಗಳಲ್ಲಿ ಮಾರ್ಷಲ್ಗಳು ಕಾರ್ಯಚರಣೆ ನಡೆಸುತ್ತಿದ್ದಾರೆ. ಯಾರೇ ನಿಯಮ ಉಲ್ಲಂಘಿಸಿದರೂ ಅವರಿಗೆ ದಂಡ ವಿಸುವುದು ಗ್ಯಾರಂಟಿ.
ಜನ ಮೈಮರೆತು ಓಡಾಡುತ್ತಿರುವುದರಿಂದಲೇ ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ನೀಡಿರುವ ಹಿನ್ನಲೆಯಲ್ಲಿ ಜನರಿಗೆ ನಿಯಮ ಪಾಲನೆ ಬಗ್ಗೆ ಅರಿವು ಬರಬೇಕು ಎಂಬ ಉದ್ದೇಶದಿಂದ ದಂಡಾಸ್ತ್ರ ಪ್ರಯೋಗಿಸಲಾಗುತ್ತಿದೆ.
ಹಾಗಂತ ದುಬಾರಿ ದಂಡ ವಿಸುತ್ತಿಲ್ಲ. ಮಾಮೂಲಿ ದಂಡ ವಸೂಲಿ ಮಾಡಲಾಗುತ್ತಿದ್ದು, ಜನರು ಸಹಕರಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ಗುಪ್ತಾ ಮನವಿ ಮಾಡಿಕೊಂಡಿದ್ದಾರೆ.