ಬೈಕ್-ಕಾರುಗಳಲ್ಲಿ ಏಕಾಂಗಿಯಾಗಿ ಸಂಚರಿಸುವವರಿಗೆ ಮಾಸ್ಕ್ ಕಡ್ಡಾಯವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.26- ಮಾಸ್ಕ್ ಕಡ್ಡಾಯದಲ್ಲಿ ಬಿಬಿಎಂಪಿ ಸ್ವಲ್ಪ ರಿಲ್ಯಾಕ್ಸ್ ನೀಡಿದೆ. ಮಾಸ್ಕ್ ಅಳವಡಿಕೆ ನೀತಿಯನ್ನು ಸಡಿಲಿಸುವಂತೆ ಸಾರ್ವಜನಿಕರು ಮಾಡಿಕೊಂಡ ಮನವಿ ಮೇರೆಗೆ ಬಿಬಿಎಂಪಿ ಈ ತೀರ್ಮಾನ ಕೈಗೊಂಡಿದೆ.

ಬೈಕ್ ಮತ್ತು ಕಾರುಗಳಲ್ಲಿ ಏಕಾಂಗಿಯಾಗಿ ಸಂಚರಿಸುವವರಿಗೆ ಮಾಸ್ಕ್ ಇನ್ಮುಂದೆ ಕಡ್ಡಾಯವಿಲ್ಲ. ಆದರೆ ಹಿಂಬದಿ ಸವಾರ ಮತ್ತು ಕಾರಿನಲ್ಲಿ ಇತರ ಪ್ರಯಾಣಿಕರಿದ್ದಾಗ ಮಾತ್ರ ಮಾಸ್ಕ್ ಅಳವಡಿಸಿಕೊಳ್ಳಬೇಕು.

ಆದರೆ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿದೆ.

Facebook Comments

Sri Raghav

Admin