ಜಪಾನ್‌ನಲ್ಲಿ 18ನೇ ಶತಮಾನದ 1,500ಕ್ಕೂ ಮಂದಿಯ ಅಸ್ಥಿಪಂಜರ ಪತ್ತೆ…!

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಆ.27- ಪಶ್ಚಿಮ ಜಪಾನ್ ಒಸಾಕಾ ನಗರದಲ್ಲಿ 1,500ಕ್ಕೂ ಹೆಚ್ಚು ಮನುಷ್ಯನ ಮೂಳೆಗಳು ಪತ್ತೆಯಾಗಿದ್ದು, ಇದನ್ನು ಸುಮಾರು 18ನೇ ಶತಮಾನದ ಸಮಾ ಸ್ಥಳವೆಂದು ಹೇಳಲಾಗಿದೆ.

ಉಮೇಡಾ ಸಮಾ ಎಂದು ಕರೆಯಲ್ಪಡುವ ಈ ತಾಣವು 1850ರಿಂದ 1860ರ ವರೆಗೆ ಎಡೋ ಮತ್ತು ಮೀಜಿ ಅವಯ ಏಳು ಐತಿಹಾಸಿಕ ಸಮಾ ಸ್ಥಳಗಳು ಉತ್ಖನನ ವೇಳೆ ಕಂಡುಬಂದಿದ್ದವು.

ಸಂಶೋಧಕರು ಈ ಸ್ಥಳದಲ್ಲಿ 350 ಸಣ್ಣ ಸಮಾಗಳು ಮತ್ತು ನಾಲ್ಕು ಹಂದಿಮರಿಗಳು, ಕುದುರೆಗಳು, ಬೆಕ್ಕುಗಳು ಸೇರಿದಂತೆ ಪ್ರಾಣಿಗಳ ಅವಶೇಷಗಳು ಪತ್ತೆಯಾಗಿವೆ ಎಂದು ಅಕಾರಿಗಳು ತಿಳಿಸಿದ್ದಾರೆ.

ಒಸಾಕಾ ನಗರ ಸಾಂಸ್ಕøತಿಕ ಒಡೆತನ ಸಂಘ ಈ ಕುರಿತಂತೆ ತನಿಖೆ ಕೈಗೊಂಡಿದೆ. ಈ ಪ್ರದೇಶದಲ್ಲಿ ರೈಲು ನಿಲ್ದಾಣ ನಿರ್ಮಾಣಕ್ಕೆ ಅಕಾರಿಗಳು ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಸುಮಾರು 1500ಕ್ಕೂ ಹೆಚ್ಚು ಮನುಷ್ಯ ಹಾಗೂ ಪ್ರಾಣಿಗಳ ಅಸ್ಥಿ ಪಂಜರಗಳು ಪತ್ತೆಯಾಗಿವೆ.

ಮೃತರು ಬಹುತೇಕ ಸ್ಥಳೀಯರಿರಬಹುದು ಎಂದು ಶಂಕಿಸಲಾಗಿದೆ. ಇದರಲ್ಲಿ ಮಕ್ಕಳ ಅಸ್ಥಿ ಪಂಜರಗಳು ಕೂಡ ಪತ್ತೆಯಾಗಿವೆ. ಇವರುಗಳು ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿದ್ದಾರೆಯೇ ಅಥವಾ ಸಾಮೂಹಿಕ ನರಮೇಧ ನಡೆದಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin