ವಿಶಾಖಪಟ್ಟಣದ ರಾಸಾಯನಿಕ ಘಟಕದಲ್ಲಿ ಬೆಂಕಿ : ಓರ್ವ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್,ಜು.14- ರಾಸಾಯನಿಕ ಘಟಕವೊಂದರಲ್ಲಿ ಬೆಂಕಿ ಹೊತ್ತಿಕೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

ಫಾರ್ಮಾಸಿಟಿಯಲ್ಲಿರುವ ರಾಮ್‍ಕಿ ಸಿಇಟಿಪಿ ದ್ರಾವಕದ ಕಟ್ಟಡದಲ್ಲಿ ನಿನ್ನೆ ತಡರಾತ್ರಿ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ರಾಸಾಯನಿಕ ಸ್ಥಾವರ ಕಟ್ಟಡದಲ್ಲಿ ಸುಮಾರು ಡಜನ್ ಸ್ಫೋಟಗಳು ಕೇಳಿಬಂದಿದ್ದು, ಸ್ಫೋಟಗಳ ನಂತರ ದೂರದಿಂದಲೇ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದೆವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸತತ ನಾಲ್ಕು ಗಂಟೆಗಳ ಅಗ್ನಿಶಾಮಕ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲ. ರಿಯಾಕ್ಟರ್‍ನಿಂದ ಬೆಂಕಿ ಪ್ರಾರಂಭವಾಗಿ ಇತರ ಭಾಗಗಳಿಗೆ ಆವರಿಸಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇ7 ರಂದು ನಗರದ ಎಲ್ಜಿ ಪಾಲಿಮರ್ಸ್ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದಲ್ಲೂ ಭಾರಿ ಪ್ರಮಾಣದ ಅನಿಲ ಸೋರಿಕೆಯಾಗಿ 14 ಮಂದಿ ಸಾವನ್ನಪ್ಪಿದ್ದರು.

Facebook Comments

Sri Raghav

Admin