ಚಂದನವನದ ನಿರ್ದೇಶಕ ಮಸ್ತಾನ್ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.21- ಚಂದನವನದ ಖ್ಯಾತ ಡಿಸೈನರ್ ಹಾಗೂ ನಿರ್ದೇಶಕ ಮಸ್ತಾನ್ (63) ಅವರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಮಸ್ತಾನ್ ಅವರಿಗೆ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿದ್ದು ಹೆಸರುಘಟ್ಟದ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ 4 ದಶಕಕ್ಕೂ ಹೆಚ್ಚು ಕಾಲ ಗುರುತಿಸಿಕೊಂಡಿದ್ದ ಮಸ್ತಾನ್ ಅವರು ಚಂದನವನದ ಬಹುತೇಕ ನಿರ್ಮಾಪಕರು ಹಾಗೂ ನಿರ್ದೇಶಕರ ಅಚ್ಚುಮೆಚ್ಚಿನ ಡಿಸೈನರ್ ಆಗಿದ್ದರು.

ಮಸ್ತಾನ್ ಅವರಿಗೆ ಕನ್ನಡ ಚಿತ್ರರಂಗ ದೊಂದಿಗಿನ ನಂಟಿನಿಂದಲೇ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡ ಮಸ್ತಾನ್ ಅವರು ಮೋಹನ್ ಅಭಿನಯಿಸಿದ ಶುಕ್ಲಾಂಭರದರಂ ಎಂಬ ಚಿತ್ರದ ಮೂಲಕ ನಿರ್ದೇಶಕರಾದವರು. ನಂತರ ಕಲ್ಲೇಶಿಮಲ್ಲೇಶಿ, ನೀತುಶೆಟ್ಟಿ ನಟಿಸಿದ್ದ ಸಿತಾರಾ ಚಿತ್ರವನ್ನು ನಿರ್ದೇಶಿಸಿದ್ದರು.

ಕೇಜ್ರಿಸ್ಟಾರ್ ರವಿಚಂದ್ರನ್‍ರ ಬಹುತೇಕ ಚಿತ್ರಗಳಿಗೆ ಡಿಸೈನರ್ ಕೆಲಸ ಮಾಡಿದ್ದ ಮಸ್ತಾನ್ ಅವರು ಸುಮಾರು 2000ಕ್ಕೂ ಹೆಚ್ಚು ಚಿತ್ರಗಳಿಗೆ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದು ಅವರ ನಿಧನಕ್ಕೆ ಚಿತ್ರರಂಗದ ಹಲವರು ಗಣ್ಯರು ಕಂಬನಿ ಮಿಡಿದಿದ್ದಾರೆ.

Facebook Comments