ಮ್ಯಾಟ್ರಮೋನಿಲಿ ನೋಡಿದ ಹುಡುಗಿಗೆ ಮರುಳಾಗಿ 6 ಲಕ್ಷ ರೂ. ಕಳೆದುಕೊಂಡ..!
ಹಾಸನ, ಆ.16- ಮ್ಯಾಟ್ರಮೋನಿ ಮೂಲಕ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡು 6 ಲಕ್ಷ ರೂ. ಮೋಸ ಮಾಡಿದ್ದ ಚಾಲಾಕಿ ಯುವತಿಯನ್ನು ಪೊಲೀಸರು ಬಂಸಿದ್ದಾರೆ.
ಲಕ್ಷ್ಮಿ (32) ಬಂತ ಯುವತಿ. ಚಿಕ್ಕಬಳ್ಳಾಪುರ ಮೂಲದವಳಾಗಿದ್ದು, ಹಾಸನದ 40 ವರ್ಷದ ಅವಿವಾಹಿತ ವ್ಯಕ್ತಿಯನ್ನು ಆರೋಪಿ ಲಕ್ಷ್ಮಿ ಮ್ಯಾಟ್ರಮೋನಿ ಮೂಲಕ ಪರಿಚಯ ಮಾಡಿಕೊಂಡಿದ್ದಳು.
ನಾನು ಅನಾಥೆ. ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದೇನೆ. ಐಟಿ ಉದ್ಯೋಗಿಯಾಗಿದ್ದೇನೆ. ಮದುವೆಯಾಗಬೇಕು ಎಂದುಕೊಂಡಿದ್ದೇನೆ ಎಂದು ಪರಮೇಶ್ನನ್ನು ಮ್ಯಾಟ್ರಮೋನಿ ಮೂಲಕ ಪರಿಚಯ ಮಾಡಿಕೊಂಡು ಮಾತುಕತೆ ನಡೆಸಿದ್ದರು.
2019 ಡಿಸೆಂಬರ್ನಿಂದ 2020ರ ವರೆಗೂ ಸುಮಾರು 6 ಲಕ್ಷ ರೂ.ಗಳನ್ನು ಪರಮೇಶ್ ಖಾತೆಯಿಂದ ಜಮಾ ಮಾಡಿಸಿಕೊಂಡಿದ್ದಳು. ಹಣ ಬಂದ ಕೂಡಲೇ ನನಗೆ ಕಾಲ್ ಮಾಡಿದರೆ ಅತ್ಯಾಚಾರ ಕೇಸ್ ಹಾಕುತ್ತೇನೆ ಎಂದು ಲಕ್ಷ್ಮಿ ಬೆದರಿಕೆ ಹಾಕಿದ್ದಳು.
ಕೋಲಾರ ಮೂಲದ ಶಿವಣ್ಣ ಎಂಬ ವ್ಯಕ್ತಿಯ ಸಹಾಯ ಪಡೆದು ಜನರಿಗೆ ಮೋಸ ಮಾಡುತ್ತಿದ್ದಳು. ಕೊನೆಗೆ ಪರಮೇಶ್ ತನಗಾಗಿರುವ ಮೋಸದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಲಕ್ಷ್ಮಿ ಹಾಗೂ ಆಕೆಗೆ ಸಹಾಯ ಮಾಡಿದ ಶಿವಣ್ಣನನ್ನು ಬಂಸಿದ್ದಾರೆ.