ಮ್ಯಾಟ್ರಿಮೋನಿ ನಂಬಿ 3 ಲಕ್ಷ ಉಂಡೆನಾಮ ಹಾಕಿಸಿಕೊಂಡ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.30- ಮ್ಯಾಟರ್‍ಮೋನಿಯಲ್ಲಿ ಪರಿಚಯವಾದ ಯುವಕ 3 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾನೆಂದು ಮಹಿಳಾ ಸಾಫ್ಟ್‍ವೇರ್ ಎಂಜಿನಿಯರ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳಾ ಟೆಕ್ಕಿಯೊಬ್ಬರಿಗೆ ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ತನ್ನ ಹೆಸರು ಕಬೀರ್ ಆನಂದ್, ಲಂಡನ್‍ನಲ್ಲಿ ನೆಲೆಸಿರುವು ದಾಗಿ ಹೇಳಿಕೊಂಡಿದ್ದಾನೆ.

ಈತನ ಮಾತನ್ನು ನಂಬಿದ ಟೆಕ್ಕಿ ಆತನೊಂದಿಗಿನ ಪರಿಚಯ ಸ್ನೇಹಕ್ಕೆ ತಿರುಗಿದೆ. ತದನಂತರದಲ್ಲಿ ಇವರಿಬ್ಬರ ಮಾತುಕತೆ ಮುಂದುವರಿದಿದೆ. ಲಂಡನ್‍ನಿಂದ ಭಾರತಕ್ಕೆ ಬರುತ್ತಿದ್ದೇನೆ ಎಂದು ಹೇಳಿದ ಯುವಕನ ಮಾತನ್ನು ಈಕೆ ನಂಬಿದ್ದಾಳೆ. ನಂತರ ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ನಾನು ದೆಹಲಿಗೆ ಬಂದಿದ್ದೇನೆ.

ನನ್ನ ಬಳಿ ಇರುವ ಕರೆನ್ಸಿಯನ್ನು ಭಾರತದ ರೂಪಾಯಿಗೆ ಬದಲಾಯಿಸಬೇಕು. ಹಾಗಾಗಿ ತಕ್ಷಣ 3 ಲಕ್ಷ ಹಣ ತನ್ನ ಖಾತೆಗೆ ಹಾಕುವಂತೆ ಹೇಳಿದ್ದಾನೆ. ಆತನನ್ನು ಸಂಪೂರ್ಣವಾಗಿ ನಂಬಿದ್ದ ಈಕೆ 3 ಲಕ್ಷ ಹಣವನ್ನು ಆತನ ಖಾತೆಗೆ ವರ್ಗಾಯಿಸಿದ್ದಾರೆ. ತದನಂತರ ಆತನ ಫೋನ್ ಸ್ವಿಚ್ ಆಫ್ ಆಗಿದೆ.

ಎಷ್ಟೇ ಪ್ರಯತ್ನಿಸಿದರೂ ಆತ ಮೊಬೈಲ್‍ಗೆ ಸಿಗದಿದ್ದಾಗ ತಾನು ಮೋಸ ಹೋಗಿರುವುದು ಅರಿವಿಗೆ ಬಂದು ತಕ್ಷಣ ವೈಟ್‍ಫೀಲ್ಡ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

Facebook Comments