ಸಿಂಗಲ್ ಎಂಜಿನ್ ಡಕೋಟಾ ವಿಮಾನದಲ್ಲಿ ಬ್ರಿಟಿಷ್ ಪೈಲೆಟ್‍ಗಳ ವಿಶ್ವ ಪರ್ಯಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಸಾಹಸಿ ಮಾನವನ ಸಾಹಸಕ್ಕೆ ಕೊನೆ ಎಂಬುದಿಲ್ಲ. ಹೊಸ ಹೊಸ ಸಾಹಸ ಅಭಿಯಾನಗಳು ಈ ವಿಶ್ವದಲ್ಲಿ ನಡೆಯುತ್ತಲೇ ಇರುತ್ತವೆ. ಬ್ರಿಟಿನ್‍ನ ಪೈಲೆಟ್‍ಗಳಿಬ್ಬರು ಅತ್ಯಂತ ಹಳೆಯ ವಿಮಾನದಲ್ಲಿ ಪ್ರಪಂಚ ಪರ್ಯಟನೆ ಸಾಹಸ ಕೈಗೊಂಡಿದ್ದಾರೆ. ಈ ಕುರಿತು ಇಲ್ಲೊಂದು ವರದಿ.

ಬ್ರಿಟಿಷ್ ಪೈಲೆಟ್‍ಗಳಾದ ಸ್ಟೀವ್ ಬ್ರೂಕ್ಸ್ ಮತ್ತು ಮ್ಯಾಟ್ ಜೋನ್ಸ್ ಅತ್ಯಂತ ಹಳೆಯ ವಿಮಾನದ ಮೂಲಕ ವಿಶ್ವ ಪ್ರದಕ್ಷಿಣೆ ಆರಂಭಿಸಿದ್ದಾರೆ. ಇದು ಎರಡನೇ ಮಹಾ ವಿಶ್ವ ಯುದ್ದದ ವೇಳೆ ಮಿತ್ರಪಡೆಗಳು ಬಳಸಿದ ಸಮರ ವಿಮಾನ. ಸಿಲ್ವರ್ ಸ್ಪಿಟ್‍ಫೈರ್ ಎಂಬ ಹೆಸರಿನ ಈ ಪುರಾತನ ಫೈಟರ್‍ಜೆಟ್ ಏಕ ಎಂಜಿನ್ ಹೊಂದಿದೆ.

ದಕ್ಷಿಣ ಇಂಗ್ಲೆಂಡ್‍ನ ವೆಸ್ಟ್ ಸುಸ್ಸೆಕ್ಸ್‍ನ ಗುಡ್‍ವುಡ್ ಏರೋಡ್ರಮ್‍ನಿಂದ ಸ್ಟೀವ್ ಮತ್ತು ಮ್ಯಾಟ್ ಪ್ರಪಂಚ ಪರ್ಯಟನೆ ಕೈಗೊಂಡಿದ್ದಾರೆ. ಈ ಸಾಹಸಿಗಳ ಸಾಹಸ ಅಭಿಯಾನಕ್ಕೆ ದಿ ಲಾಂಗೆಸ್ಟ್ ಫ್ಲೈಟ್ ಎಂದು ಹೆಸರಿಡಲಾಗಿದೆ. ಈ ಪೈಲೆಟ್‍ಗಳು 30ಕ್ಕೂ ಹೆಚ್ಚು ದೇಶಗಳ ನಡುವೆ 43,000 ಕಿಲೋಮೀಟರ್ ದೂರವನ್ನು ಓಬೀರಾಯನ ಕಾಲದ ವಿಮಾನದಲ್ಲಿ ಕ್ರಮಿಸುವರು.  ದ್ವಿತೀಯ ಮಹಾಸಂಗ್ರಾಮದಲ್ಲಿ ವ್ಯಾಪಕವಾಗಿ ಬಳಕೆಯಾಗಿದ್ದ ಸಿಲ್ವರ್ ಸ್ಪಿಟ್‍ಫೈರ್ ಫೈಟರ್ ಜೆಟ್‍ನನ್ನು ನವೀಕರಿಸಿ ಈ ಸಾಹಸ ಅಭಿಯಾನಕ್ಕೆ ಬಳಸಲಾಗಿದೆ.

ಈ ವಿಮಾನವನ್ನು ಕಳಡಿ ಮತ್ತೆ ಬಿಡಿಬಿಡಿಯಾಗಿ ಹೊಸದಾಗಿ ಜೋಡಿಸಲು ಎರಡು ವರ್ಷ ಬೇಕಾಯಿತು. ವಿಶ್ವ ಪರ್ಯಟನೆ ಯಶಸ್ವಿಯಾಗಿ ಪೂರ್ಣಗೊಳ್ಳಲು ನಾಲ್ಕು ತಿಂಗಳು ಬೇಕು.

Facebook Comments