ಫೆ.7ರಂದು ಮತ್ತೆ ಉದ್ಭವ ಚಿತ್ರ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.3- ಮಲೆನಾಡಿನ ತೀರ್ಥಹಳ್ಳಿಯ ಹಿರಿಯ ಪ್ರತಿಭೆ ಕೋಡ್ಲು ರಾಮಕೃಷ್ಣ ಅವರು ನಿರ್ದೇಶಿಸಿರುವ ಮತ್ತೆ ಉದ್ಭವ ಚಿತ್ರವು ಫೆ.7ರಂದು ಬಿಡುಗಡೆಯಾಗಲಿದೆ.
ಪ್ರಮೋದ್, ಮಿಲನಾ ನಾಗರಾಜ್, ರಂಗಾಯಣ ರಘು ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮತ್ತೆ ಉದ್ಭವ ಚಿತ್ರದ ಚಿತ್ರೀಕರಣವು ಬಹುತೇಕ ಮುಗಿಸಿದ್ದು ಪ್ರೀ ಪ್ರೊಡಕ್ಷನ್ಸ್ ಕಾರ್ಯಗಳಲ್ಲಿ ನಿರತವಾಗಿದ್ದು, ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್ ಪಡೆದು ಚಿತ್ರ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ.

ಬಿಸಿಲು ಬೆಳದಿಂಗಳು ಚಿತ್ರ ನಿರ್ದೇಶನದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡ ಕೋಡ್ಲು ರಾಮಕೃಷ್ಣ ಅವರು ಈ ಹಿಂದೆ ನಿರ್ದೇಶಿಸಿದ್ದ ಉದ್ಭವ ಚಿತ್ರವು ಚಿತ್ರರಂಗದಲ್ಲಿ ಸಂಚಲನ ಮೂಡಿಸಿ 25 ವಾರಗಳ ಪ್ರದರ್ಶನ ಕಾಣುವ ಮೂಲಕ ದಾಖಲೆ ಬರೆದರು. ಈಗ ಬಿಡುಗಡೆಯಾಗಲು ಸಜ್ಜಾಗಿರುವ ಮತ್ತೆ ಉದ್ಭವ ಚಿತ್ರವು ಕೂಡ ಅದೇ ರೀತಿಯ ಅನುಭವವನ್ನು ನೀಡಲು ಸಜ್ಜಾಗಿದೆ.

ಕೋಡ್ಲು ರಾಮಕೃಷ್ಣ ಅವರು ಚಿತ್ರರಂಗದಿಂದ ಮಾತ್ರವಲ್ಲದೆ ಹಲವು ಸಾಕ್ಷ್ಯ ಚಿತ್ರಗಳಲ್ಲೂ ತಮ್ಮ ನಿರ್ದೇಶನದ ಬೆಳಕು ಚೆಲ್ಲಿದ್ದು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ವೀಕ್ಷಣೆ ಮಾಡಿ ಕೋಡ್ಲು ರಾಮಕೃಷ್ಣರಿಗೆ ಬೆಂಬಲ ನೀಡಬೇಕೆಂದು ಮಲೆನಾಡು ಮಿತ್ರ ವೃಂದದವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Facebook Comments