ಮೌನಿ ಅಮವಾಸ್ಯೆ ಪ್ರಯಾಗ್‍ನಲ್ಲಿ ಮಿಂದ ಭಕ್ತರು

ಈ ಸುದ್ದಿಯನ್ನು ಶೇರ್ ಮಾಡಿ

ಪ್ರಯಾಗ್,ಜ.24- ಮೌನಿ ಅಮಾವಾಸ್ಯಕ್ಕಿಂತ ಮುಂಚಿತವಾಗಿ ಪವಿತ್ರ ಸ್ನಾನ ಮಾಡಲು ಪ್ರಯಾಗ್‍ನ ಯಮುನಾ ಮತ್ತು ಗಂಗಾ ಪೌರಾಣಿಕ ಸರಸ್ವತಿಯ ಸಂಗಮದಲ್ಲಿ ಲಕ್ಷಾಂತರ ಭಕ್ತರು ಮಿಂದರು. ವಾರ್ಷಿಕವಾಗಿ ನಡೆಯುವ ಮಾಘ ಮೇಳದಲ್ಲಿ ದೇಶಾದ್ಯಂತ ಸುಮಾರು ಎರಡು ಕೋಟಿ ಆಗಮಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನಿ ಅಮಾವಾಸ್ಯಯಲ್ಲಿ ನಡೆಯುವ ಮೂರನೇ ಸ್ನಾನದಲ್ಲಿ ಮುಂಜನೆ 2.40ಕ್ಕೆ ಪ್ರಾರಂಭವಾಯಿತು. ಅನೇಕ ತಾತ್ಕಾಲಿಕ ಪೊಟೂನ್ ಸೇತುವೆಗಳು, ಡೇರೆಗಳು ಮತ್ತು ಭದ್ರತಾ ಚೆಕ್‍ಪಾಯಿಂಟ್‍ಗಳನ್ನು ಮಾಡಿರುವುದರಿಂದ ಅಧಿಕಾರಿಗಳು ಯಾತ್ರಾರ್ಥಿ ಗಳಿಗೆ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಭಕ್ತರ ಭದ್ರತೆಗಾಗಿ 6,000 ಪೊಲೀಸರನ್ನು ಮೇಳ ಮೈದಾನದಲ್ಲಿ ನಿಯೋಜಿಸಲಾಗಿದೆ.

ಜನಸಮೂಹ ನಿರ್ವಹಣಾ ಪ್ರಯತ್ನಗಳ ಭಾಗವಾಗಿ, ಪೊಲೀಸರು ಯಾತ್ರಾರ್ಥಿಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ನಿರ್ಮಾಣ ಮಾಡಲಾಗಿದೆ. ಸಂಗಮಕ್ಕೆ ಹೋಗುವ ರಸ್ತೆಗಳಲ್ಲಿ ತಿರುವುಗಳನ್ನು ಸಹ ಜರಿಗೊಳಿಸಿ ಭಕ್ತಾಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

Facebook Comments