2ನೇ ಟೆಸ್ಟ್ ನಲ್ಲೂ ಅಬ್ಬರಿಸಿದ ಮಾಯಾಂಕ್ ಶತಕದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಪುಣೆ, ಅ. 10- ಹರಿಣಗಳ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಸಂಭ್ರಮ ಆಚರಿಸಿದ್ದ ಮಯಾಂಕ್ ಅಗರ್‍ವಾಲ್ ಎರಡನೇ ಟೆಸ್ಟ್‍ನಲ್ಲೂ ಆಕರ್ಷಕ ಶತಕ ದಾಖಲಿಸುವ ಮೂಲಕ ತಂಡವನ್ನು ಬೃಹತ್ ಮೊತ್ತ ದಾಖಲಿಸಿದೆ. 183 ಎಸೆತಗಳನ್ನು ಎದುರಿಸಿದ ಮಾಯಾಂಕ್ 16 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ ವೃತ್ತಿಜೀವನದ 2ನೇ ಶತಕ ಪೂರೈಸಿದರು.

ವಿಶ್ವ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಮೊದಲ ಪಂದ್ಯದ ಎರಡು ಇನ್ನಿಂಗ್ಸ್‍ನಲ್ಲೂ ಶತಕ ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದ ಹಿಟ್‍ಮ್ಯಾನ್ ರೋಹಿತ್ ಶರ್ಮಾ ದ್ವಿತೀಯ ಇನ್ನಿಂಗ್ಸ್‍ನಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದ್ದಾರೆ.

ಟೆಸ್ನಲ್ಲಿ 50 ನೆ ಪಂದ್ಯದ ಸಾರಥ್ಯವನ್ನು ವಹಿಸಿರುವ ವಿರಾಟ್‍ಕೊಹ್ಲಿ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಟೀಂ ಇಂಡಿಯಾದ ಪರ ಆರಂಭಿಕರಾಗಿ ಕ್ರೀಸ್‍ಗೆ ಇಳಿದ ಮೊದಲ ಟೆಸ್ಟ್‍ನ ಶತಕ ವೀರರಾದ ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್‍ವಾಲ್ ದಕ್ಷಿಣ ಆಫ್ರಿಕಾದ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿದರು.

ನಿಧಾನಗತಿಯ ಆಟಕ್ಕೆ ಮುಂದಾಗಿದ್ದ ರೋಹಿತ್ (14 ರನ್, 1 ಬೌಂಡರಿ) ರಬಡಾ ಬೌಲಿಂಗ್‍ನಲ್ಲಿ ವಿಕೆಟ್ ಕೀಪರ್ ಕ್ಲಿಂಟನ್ ಡಿ ಕಾಕ್‍ಗೆ ಕ್ಯಾಚ್ ನೀಡಿ ಪೆವೆಲಿಯನ್‍ನತ್ತ ಹೆಜ್ಜೆ ಹಾಕಿದರು. ರೋಹಿತ್ ಔಟಾದ ನಂತರ ಚೇತೇಶ್ವರ್ ಪೂಜಾರ ನಿಧಾನಗತಿಯ ಆಟಕ್ಕೆ ಮುಂದಾದರು.

 

Facebook Comments