ಮತ್ತೆ ಬೆಂಚ್ ಕಾದ ಮಯಾಂಕ್ ಅಗರ್‍ವಾಲ್‍

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಡಿ.15- ವೆಸ್ಟ್‍ಇಂಡೀಸ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಸರಣಿಯ ಚೆನ್ನೈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಬೇಕೆಂಬ ಮಯಾಂಕ್ ಅಗರ್‍ವಾಲ್‍ರ ಕನಸಿಗೆ ತಣ್ಣೀರು ಬಿದ್ದು ಮತ್ತೆ ಬೆಂಚ್ ಕಾಯುವಂತಾಗಿದೆ.

ಟೆಸ್ಟ್ ಮಾದರಿಯಲ್ಲಿ ಬ್ಯಾಟಿಂಗ್‍ನ ಆಧಾರಸ್ತಂಭವಾಗಿರುವ ಮಯಾಂಕ್ ಏಕದಿನ ಹಾಗೂ ಟ್ವೆಂಟಿ-20 ಮಾದರಿಯ ಪಂದ್ಯಗಳನ್ನು ಆಡಬೇಕೆಂದು ಮೊದಲಿನಿಂದ ಬಯಕೆ ಹೊಂದಿದ್ದರು. ಈ ಮಾದರಿಯ ಆಟಕ್ಕೆ ಅವರು ಹೇಳಿ ಮಾಡಿಸಿದ ಆಟಗಾರನಾಗಿದ್ದರೂ ಕೂಡ ಇನ್ನೂ ಅವಕಾಶಗಳು ದೊರೆಯದೆ ಇರುವುದು ದುಸ್ತರ.

ಈ ಹಿಂದೆ ನಡೆದ ವೆಸ್ಟ್‍ಇಂಡೀಸ್, ಬಾಂಗ್ಲಾದೇಶ ಸರಣಿಗಳ ವೇಳೆಯೂ ಮಯಾಂಕ್ ಅವರ ಹೆಸರು ಕೇಳಿಬಂದಿತ್ತಾದರೂ ಆಡುವ 11ರ ಬಳಗದಲ್ಲಿ ಕಣಕ್ಕಿಳಿಯುವಲ್ಲಿ ಎಡವಿದ್ದರು, ಇಂದಿನ ಪಂದ್ಯದಲ್ಲೂ ಕೂಡ ಮಯಾಂಕ್ ನಿರಾಸೆ ಅನುಭವಿಸಿದ್ದಾರೆ. ದುಬೆ ಪಾದಾರ್ಪಣೆ: ವೆಸ್ಟ್‍ಇಂಡೀಸ್ ವಿರುದ್ಧ ನಡೆದ 2ನೆ ಟ್ವೆಂಟಿ-20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ದಾಖಲಿಸಿದ ಯುವ ಆಟಗಾರ ಶಿವಂದುಬೆಯವರು ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಮೂಲಕ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾರ್ದಾಪಣೆ ಮಾಡಿದ್ದಾರೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 2 ಓವರ್‍ಗಳಲ್ಲಿ 5 ರನ್‍ಗಳನ್ನು ಗಳಿಸಿದ್ದು, ರೋಹಿತ್ ಶರ್ಮಾ (0 ರನ್), ಕೆ.ಎಲ್.ರಾಹುಲ್ (5) ರನ್ ಗಳಿಸಿದ್ದರು.

Facebook Comments

Sri Raghav

Admin