ನ್ಯೂಜಿಲೆಂಡ್ ವಿರುದ್ಧ ನಾಳೆಯಿಂದ ಏಕದಿನ ಸರಣಿ : ಕೊನೆಗೂ ಕೈಗೂಡಿತು ಮಯಾಂಕ್ ಕನಸು

ಈ ಸುದ್ದಿಯನ್ನು ಶೇರ್ ಮಾಡಿ

ಹ್ಯಾಮಿಲ್ಟನ್,ಫೆ.4- ಕನ್ನಡಿಗ ಮಯಾಂಕ್ ಅಗರ್‍ವಾಲ್‍ರ ಕನಸು ಕೊನೆಗೂ ನನಸಾಗುವ ಕಾಲ ಕೂಡಿಬಂದಿದೆ. ಬಹಳಷ್ಟು ಏಕದಿನ ಸರಣಿಗಳಲ್ಲಿ ಬೆಂಚ್ ಕಾದಿದ್ದ ಮಯಾಂಕ್‍ಗೆ ನಾಳೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಮೈದಾನಕ್ಕಿಳಿಯಲಿದ್ದಾರೆ. ಭಾರತ ತಂಡದ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಗಳಲ್ಲಿ ಗಾಯಗೊಂಡಿರುವುದರಿಂದ ಆರಂಭಿಕ ಆಟಗಾರರ ಹೊಣೆಯು ಕನ್ನಡಿಗ ಮಯಾಂಕ್ ಹೆಗಲಿಗೇರಿದೆ.

ಉದ್ದೀಪನ ಮದ್ದು ಸೇವನೆ ಆರೋಪ ಎದುರಿಸುತ್ತಿದ್ದ ಮುಂಬೈನ ಯುವ ಆಟಗಾರ ಪೃಥ್ವಿಶಾ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮರಳಿದ್ದು ಮಯಾಂಕ್ ರೊಂದಿಗೆ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತಿದ್ದಾರೆ. ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧ ನಡೆದ ಅಂತಿಮ ಚುಟುಕು ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಗಾಯಗೊಂಡಿದ್ದು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿರುವುದರಿಂದ ಟೆಸ್ಟ್‍ನಲ್ಲೂ ಮಾಯಾಂಕ್ ಹಗೂ ಶಾರೇ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ.

# ರಾಹುಲ್‍ಗೆ ವಿಕೆಟ್ ಕೀಪರ್ ಹೊಣೆ:
ನ್ಯೂಜಿಲೆಂಡ್ ವಿರುದ್ಧದ ಚುಟುಕು ಸರಣಿಯಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿ ಗಮನ ಸೆಳೆದಿರುವ ಮತ್ತೊಬ್ಬ ಕನ್ನಡಿಗ ಕೆ.ಎಲ್.ರಾಹುಲ್ ಏಕದಿನ ಸರಣಿಯಲ್ಲೂ ವಿಕೆಟ್ ಕೀಪರ್ ಹೊಣೆ ಹೊತ್ತಿದ್ದಾರೆ. ಮಯಾಂಕ್ ಹಾಗೂ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸುವುದರಿಂದ ರಾಹುಲ್ 4ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

# ರೋಹಿತ್ ಕೊರತೆ:
ಟೀಂ ಇಂಡಿಯಾದ ಹಲವು ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಿ ತಂಡದ ಗೆಲುವಲ್ಲಿ ಮಹತ್ತರ ಪಾತ್ರ ವಹಿಸಿರುವ ರೋಹಿತ್ ಶರ್ಮಾ ಅವರು ನ್ಯೂಜಿಲೆಂಡ್‍ನ ಏಕದಿನ ಹಾಗೂ ಟೆಸ್ಟ್ ಸರಣಿಗಳಿಗೆ ಅಲಭ್ಯರಾಗಿರುವುದರಿಂದ ಕೊರತೆ ಕಾಡಲಿದೆ ಎಂದು ವಿರಾಟ್ ಕೊಹ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

# ಯುವ ಪಡೆಗೆ ಛಾನ್ಸ್:
ಇದೇ ವರ್ಷ ಚುಟುಕು ಕ್ರಿಕೆಟ್ ವಿಶ್ವಸಮರವಿದ್ದು ಆಟಗಾರರು ಗಾಯಗೊಳ್ಳುತ್ತಿರುವುದು ತಂಡದ ಮೇಲೆ ಪರಿಣಾಮ ಬೀರಲಿದೆ, ಅದರಲ್ಲೂ ರೋಹಿತ್, ಧವನ್‍ರಂತಹ ಹಿರಿಯ ಆಟಗರರೇ ಗಾಯಗೊಂಡಿರುವುದರಿಂದ ತಂಡ ಈಗ ಯುವ ಆಟಗಾರರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ.

ವಿಶ್ವಕಪ್‍ನಲ್ಲಿ ಆಡುವ ಕನಸು ಹೊತ್ತಿರುವ ಯುವ ಪಡೆಯು ನ್ಯೂಜಿಲೆಂಡ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಆ ಅವಕಾಶವನ್ನು ಪಡೆದುಕೊಳ್ಳುವ ಹುಮ್ಮಸ್ಸಿನಲ್ಲಿರುವುದರಿಂದ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿಸುವುದರಿಂದ ಏಕದಿನ ಸರಣಿಯನ್ನು ಗೆಲ್ಲುವ ಭರವಸೆ ಮೂಡಿದೆ ಎಂದು ಕೊಹ್ಲಿ ಹೇಳಿದರು.

ಟ್ವೆಂಟಿ-20 ಸರಣಿಯನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ ಏಕದಿನ ಸರಣಿಯನ್ನು ಗೆಲ್ಲುವ ಕಾತರದಲ್ಲಿದ್ದರೆ, ಚುಟುಕು ಸರಣಿಯ ಸೋಲನ್ನು ಮರೆತು ಏಕದಿನ ಸರಣಿಯನ್ನು ಗೆಲ್ಲುವ ಹುಮ್ಮಸ್ಸಿನಲ್ಲಿರುವ ನ್ಯೂಜಿಲ್ಯಾಂಡ್ ಉತ್ತಮ ಹೋರಾಟ ನೀಡುವ ಹುಮ್ಮಸ್ಸಿನಲ್ಲಿದೆ.

Facebook Comments