ವಿಶ್ವಕಪ್‍ನಲ್ಲಿ ಮಯಾಂಕ್‌ ಅಗರ್ವಾಲ್‌ಗೆ ಛಾನ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.1- ವಿಶ್ವಕಪ್‍ನಲ್ಲಿ ಭಾರತದ ಆಟಗಾರರು ಗಾಯಗೊಳ್ಳುತ್ತಿರುವುದು ಕೆಲ ಯುವ ಆಟಗಾರರ ಅದೃಷ್ಟ ಬಾಗಿಲು ತೆರೆದಂತಾಗಿದೆ.  ಶಿಖರ್ ಧವನ್ ಗಾಯಗೊಂಡಿದ್ದರಿಂದ ಯುವ ವಿಕೆಟ್‍ಕೀಪರ್ ರಿಷಭ್‍ಪಂತ್‍ಗೆ ಲಕ್ ಕುದುರಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ವಿಶ್ವಕಪ್ ಆಡುತ್ತಿದ್ದಂತೆ ಈಗ ವಿಜಯ್‍ಶಂಕರ್ ಗಾಯಗೊಂಡಿರುವುದರಿಂದ ಕನ್ನಡಿಗ ಮಯಾಂಕ್ ಅಗರ್‍ವಾಲ್‍ಗೆ ಲಕ್ ಕುದುರಿದೆ.

ವಿಜಯ್‍ಶಂಕರ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಸಂಪೂರ್ಣವಾಗಿ ವಿಶ್ವಕಪ್‍ನಿಂದ ಹೊರ ನಡೆದಿದ್ದು, ಆ ಸ್ಥಾನದಲ್ಲಿ ಕನ್ನಡಿಗ ಮಯಾಂಕ್ ಅಗರ್‍ವಾಲ್‍ರನ್ನು ಆಡಿಸಲು ಬಿಸಿಸಿಐ ನಿರ್ಧರಿಸಿದೆ.

ನಾಳೆ ವಿಶ್ವಕಪ್‍ನಲ್ಲಿ ಭಾರತ ತಂಡ ಬಾಂಗ್ಲಾದೇಶದ ಸವಾಲನ್ನು ಎದುರಿಸುತ್ತಿದ್ದು, ಮಯಾಂಕ್ ಅಗರ್‍ವಾಲ್‍ಗೆ ಆಡುವ 11ರ ಬಳಗದಲ್ಲಿ ಸ್ಥಾನ ದೊರಕದಿದ್ದರೂ ಶ್ರೀಲಂಕಾ ವಿರುದ್ಧ ಮಯಾಂಕ್‍ಗೆ ಆಡುವ ಅವಕಾಶ ದೊರೆಯುವ ಸಾಧ್ಯತೆಗಳಿವೆ.

ಪ್ರಸಕ್ತ ವಿಶ್ವಕಪ್‍ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ತಂಡವನ್ನು ಪ್ರತಿನಿದಿಸುತ್ತಿದ್ದು ಈಗ ಮಯಾಂಕ್ ಕೂಡ ಅವಕಾಶ ಪಡೆಯುವತ್ತ ಹೆಜ್ಜೆ ಹಾಕಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin