ಮಾಯಾವತಿ ಹುಟ್ಟುಹಬ್ಬ ‘ಜನಕಲ್ಯಾಣಕಾರಿ ದಿನ’ ಎಂದು ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ (ಯುಪಿ), ಜ.14- ನನ್ನ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸದೆ, ಬಡವರು ಮತ್ತು ದೀನದಲಿತರಿಗೆ ಸಹಾಯ ಮಾಡುವ ಮೂಲಕ ಸರಳವಾಗಿ ಆಚರಿಸಬೇಕೆಂದು ತಮ್ಮ ಕಾರ್ಯಕರ್ತರಿಗೆ ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಕರೆ ನೀಡಿದ್ದಾರೆ. ಜ.15 ರ ಶುಕ್ರವಾರ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಎಸ್‍ಪಿ ವರಿಷ್ಠೆಯ ಜನ್ಮದಿನವನ್ನು ಪಕ್ಷದ ಕಾರ್ಯಕರ್ತರು ಜನಕಲ್ಯಾಣಕಾರಿ ದಿನ ಎಂದು ಆಚರಿಸಲಿದ್ದಾರೆ.

ಎಲ್ಲರೂ ತಿಳಿದಂತೆ ಜ.15 ರಂದು ನನ್ನ 65ನೇ ಹುಟ್ಟುಹಬ್ಬ. ನಮ್ಮದು ಜನತೆ ಹಿತ ಬಯಸುವ ಪಕ್ಷ. ಆದ್ದರಿಂದ ಅಂದು ಜನಕಲ್ಯಾಣಕಾರಿ ಕೆಲಸಗಳನ್ನು ಮಾಡಲು ಬಯಸುತ್ತೇವೆ. ಕೋವಿಡ್-19 ಸಾಂಕ್ರಾಮಿಕದಲ್ಲಿ ಬಡವರಿಗೆ ಮತ್ತು ದೀನದಲಿತರಿಗೆ ಸಹಾಯ ಮಾಡುವ ಮೂಲಕ ಸರಳವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲು ಕಾರ್ಯಕರ್ತರಿಗೆ ತಿಳಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನನ್ನ ಜೀವನ ಚರಿತ್ರೆ ಎ ಟ್ರಾವಲಾಗ್ ಆಫ್ ಮೈ ಸ್ಟ್ರಗಲ್ ರಿಡನ್ ಲೈಫ್ ಮತ್ತು ಬಿಎಸ್‍ಪಿ ಮೂವ್‍ಮೆಂಟ್ ಪುಸ್ತಕದ 16ನೇ ಸಂಪುಟ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೊಂಡಿದ್ದಾರೆ.

Facebook Comments