7 ಶಾಸಕರನ್ನು ಅಮಾನತುಪಡಿಸಿದ ಮಾಯಾವತಿ

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ,ಅ.29- ಬಿಎಸ್‍ಪಿಯ ರಾಜ್ಯಸಭಾ ಅಭ್ಯರ್ಥಿ ವಿರುದ್ಧ ದಂಗೆ ಎದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ ಪಕ್ಷದ ಏಳು ಶಾಸಕರನ್ನು ಅಮಾನತುಗೊಳಿಸುವುದಾಗಿ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಘೋಷಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಯಾದವ್ ಅವರು ತಮ್ಮ ನಿಜವಾದ ದಲಿತ ವಿರೋಧಿ ಮುಖವನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ ಎಂದು ವಾಗ್ದಾಳಿ ಮಾಡಿರುವ ಅವರು, ಬಿಎಸ್‍ಪಿ ವಿರುದ್ದ ಬಂಡಾಯವೆದ್ದಿರುವ ಏಳು ಶಾಸಕರನ್ನು ತಕ್ಷಣವೇ ಅಮಾನತುಗೊಳಿಸಿರುವುದಾಗಿ ಹೇಳಿದ್ದಾರೆ.

ಏಳು ಬಂಡಾಯ ಶಾಸಕರ ವಿರುದ್ಧ ಕ್ರಮ ಜರುಗಿಸಿರುವ ಮಾಯಾವತಿ, ಪಕ್ಷದ ವಿರುದ್ಧ ಕೆಲಸ ಮಾಡಿದ್ದಕ್ಕಾಗಿ ಅವರಿಗೆ ಶಿಕ್ಷೆಯಾಗಲಿದೆ ಮತ್ತು ತಕ್ಷಣದಿಂದಲೇ ಇದು ಜಾರಿಗೆ ಬರುತ್ತದೆ. ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಈ ಶಾಸಕರನ್ನು ಕರೆಯಬಾರದು ಮತ್ತು ಅವರು ಬೇರೆ ಪಕ್ಷಕ್ಕೆ ಸೇರಿದ ಕೂಡಲೇ ಅವರ ಸದಸ್ಯತ್ವವನ್ನು ಪಕ್ಷಾಂತರ ವಿರೋಧಿ ಕಾನೂನಿನಡಿರದ್ದುಗೊಳಿಸಲಾಗುವುದು ಎಂದು ಪಕ್ಷದ ಫೋಸ್ಟ್ ಹೋಲ್ಡರ್‍ಗಳಿಗೆ ನಿರ್ದೇಶಿಸಲಾಗಿದೆ.

ಭವಿಷ್ಯದಲ್ಲಿ, ಈ 7 ಶಾಸಕರಿಗೆ ಬಿಎಸ್ಪಿಯಿಂದ ಸ್ಪರ್ಧಿಸಲು ಎಂದಿಗೂ ಅವಕಾಶವಿರುವುದಿಲ್ಲ. ಭವಿಷ್ಯದಲ್ಲಿ ಅವರ ಸ್ವಂತ ಸಮುದಾಯದ ಜನರು ಅವರ ವಿರುದ್ಧ ಕಣಕ್ಕಿಳಿಯುತ್ತಾರೆ. ಮುಸ್ಲಿಂ ಸಮುದಾಯವು ಭವಿಷ್ಯದಲ್ಲಿ ಬಿಎಸ್ಪಿಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆಯಲಿದೆ. ಎಸ್‍ಪಿ ಅವರ ದಲಿತ ವಿರೋಧಿ ಮುಖ ಈಗ ಜನರ ಮುಂದೆ ಇದೆ. 2022 ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರ ಮುಖವಾಡ ಕಳಚಿಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್‍ಪಿ ಯಾವಾಗಲೂ ಬಿಎಸ್‍ಪಿಗೆ ದ್ರೋಹ ಬಗೆದಿದ್ದಾರೆ ಎಂದು ಅವರು ತೀರ್ಮಾನಿಸಿದರು. ಇದಕ್ಕೂ ಮುನ್ನ ಬುಧವಾರ ಐವರು ಬಿಎಸ್‍ಪಿ ಶಾಸಕರು ಬಿಎಸ್‍ಪಿ ರಾಜ್ಯಸಭಾ ಅಭ್ಯರ್ಥಿ ರಾಮ್‍ಜಿ ಗೌ ಸಲ್ಲಿಸಿದ್ದ ನಾಮಪತ್ರಗಳಲ್ಲಿ ತಮ್ಮ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

Facebook Comments