ನೋಡಲ್ ಆಫೀಸರ್‌ಗಳ ದೂರವಾಣಿ ಸಂಪರ್ಕ ಎಲ್ಲಾ ಸದಸ್ಯರಿಗೂ ನೀಡಿ : ಬಿಬಿಎಂಪಿ ಮೇಯರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.30-ಸೋಂಕು ಬಂದಾಗ ಸದಸ್ಯರಿಗೆ ಮೊದಲ ಕರೆ ಬರಲಿದೆ. ಯಾವ ಅಧಿಕಾರಿಗಳು ನೋಡಲ್ ಅಧಿಕಾರಿ ಆಗಿರುತ್ತಾರೆ ಅವರ ದೂರವಾಣಿ ಸಂಪರ್ಕವನ್ನು 198 ಸದಸ್ಯರಿಗೆ ನೀಡಬೇಕು ಎಂದು ಮೇಯರ್ ಗೌತಮ್‍ಕುಮಾರ್ ಸೂಚಿಸಿದ್ದಾರೆ. ಎಲ್ಲಾ ಕೆಲಸ ವಲಯ ಜೆಸಿಗಳೇ ಮಾಡಲು ಸಾಧ್ಯವಿಲ್ಲ. ಎಲ್ಲಾ ವಲಯಗಳಲ್ಲಿ ಹೆಲ್ಪï ಡೆಸ್ಕ್ ಕಡ್ಡಾಯವಾಗಿ ಮಾಡಬೇಕು.

ಆಕ್ಸಿ ಮೀಟರ್ ಲಾಂಚ್ ಮಾಡಲಾಗಿದೆ. ನಮ್ಮ ಆಕ್ಸಿಜನ್ ಲೆವೆಲ್ ಎಷ್ಟಿದೆ ಅನ್ನೋದು ತಿಳಿಯಲಿದೆ. ಆಕ್ಸಿ ಮೀಟರ್ ನಮ್ಮ ಮನೆಗಳಲ್ಲಿ ಉಪಯೋಗಿಸಿದರೆ ಉತ್ತಮ ಎಂದು ಅವರು ಹೇಳಿದರು. ಅನೇಕರಿಗೆ ಸ್ವಯಂ ಸೇವಕರು ಎಂಬ ಐಡಿಗಳನ್ನು ಕೊಟ್ಟಿದ್ದೇವೆ ಆದರೆ ಅವರಿಗೆ ಆಸ್ಪತ್ರೆಗಳ ಬಗ್ಗೆ ಮಾಹಿತಿ ಇರುವುದಿಲ್ಲ ಆ ಐಡಿ ಕಾರ್ಡ್‍ಗಳನ್ನು ಹಾಕಿಕೊಂಡು ಸುತ್ತಾಡುತ್ತಿದ್ದಾರೆ, ಅವರಿಗೆ ಯಾವ ಲಾಕ್‍ಡೌನ್ ಕೂಡ ಇರುವುದಿಲ್ಲ ಎಲ್ಲಿ ಬೇಕಾದ್ರೂ ತಿರುಗಾಡಬಹುದು ಎಂದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೊದಲು ಸೇವೆ ಮಾಡುವವರಿಗೆ ಎಲ್ಲಾ ಗೊತ್ತಿದೆಯೇ ಅನ್ನೋದನ್ನು ತಿಳಿದುಕೊಂಡು ಐಡಿ ಕೊಡಿ, ನೀವು ಅದನ್ನು ಒಳ್ಳೆಯ ಉಪಯೋಗಕ್ಕೆ ಕೊಟ್ಟಿರಬಹುದು ಆದರೆ ಅದರ ದುರುಪಯೋಗವಾಗುತ್ತಿದೆ ಎಂದು ಅಧಿಕಾರಿಗಳಿಗೆ ಮೇಯರ್ ಸೂಚನೆ ನೀಡಿದರು.

Facebook Comments