ಕಸ, ಕಟ್ಟಡ ತ್ಯಾಜ್ಯ ವಿಲೇವಾರಿಗೆ ಡೆಲ್ಲಿ ಮಾದರಿ ಘಟಕಗಳ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಈಸ್ಟ್ ಡೆಲ್ಲಿ ಮುನ್ಸಿಪಲ್ ಕಾಪೆರ್ರೇಷನ್ ಮಾದರಿಯಲ್ಲೇ ಬಿಬಿಎಂಪಿಯಲ್ಲೂ ವೇಸ್ಟ್ ಎನರ್ಜಿ ಪ್ಲಾಂಟ್ ಹಾಗೂ ಕಟ್ಟಡ ಮತ್ತು ಅವಶೇಷಗಳ ಘಟಕ ಸ್ಥಾಪಿಸಲಾಗುವುದು ಎಂದು ಮೇಯರ್ ಗೌತಮ್‍ಕುಮಾರ್ ತಿಳಿಸಿದರು.

ಆಡಳಿತ ಮತ್ತು ವಿಪಕ್ಷ ನಾಯಕ ರೊಂದಿಗೆ ದೆಹಲಿ ಕಾಪೆರ್ರೇಷನ್‍ಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿದ ನಂತರ ಮೇಯರ್ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ.

ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿ ಹಾಗೂ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲು ಈಸ್ಟ್ ಡೆಲ್ಲಿ ಮುನ್ಸಿಪಲ್ ಕಾಪೆರ್ರೇಷನ್ ಉತ್ತಮವಾದ ಕ್ರಮಗಳನ್ನು ಕೈಗೊಂಡಿದೆ. ನಾವು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿನ ವ್ಯವಸ್ಥೆ ಉತ್ತಮವಾಗಿರುವುದನ್ನು ಮನಗಂಡು ಅದೇ ವ್ಯವಸ್ಥೆಯನ್ನು ಬೆಂಗಳೂರಿನಲ್ಲೂ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಈಸ್ಟ್ ಡೆಲ್ಲಿ ಮಾದರಿಯ ಘಟಕಗಳನ್ನು ಬಿಬಿಎಂಪಿಯ ಆಯ್ದ ಭಾಗಗಳಲ್ಲಿ ಅಳವಡಿಸಿಕೊಳ್ಳಲು ಯೊಜನೆ ರೂಪಿಸಲಾಗುವುದು ಎಂದು ಅವರು ಹೇಳಿದರು.

Facebook Comments