ದೆಹಲಿಯತ್ತ ಹೊರಟ ಅತೃಪ್ತರ ಟೀಮ್

ಈ ಸುದ್ದಿಯನ್ನು ಶೇರ್ ಮಾಡಿ

Atruptaru-Congress

ಬೆಂಗಳೂರು, ಜೂ.8- ದೆಹಲಿಗೆ ಹೊರಟ ಕೈ ಅತೃಪ್ತ ಶಾಸಕರು ಕುತೂಹಲ ಕೆರಳಿಸಿದ ನಡೆ.  ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರ ವರ್ತನೆ ವಿರುದ್ಧ ಸಿಡಿದೆದ್ದಿರುವ ಕೆಲ ಹಿರಿಯ ಶಾಸಕರು ದೆಹಲಿಗೆ ತೆರಳಿ ತಮ್ಮ ಅನಿಸಿಕೆಗಳು ಮತ್ತು ದೂರು ಸಲ್ಲಿಸಲು ಮುಂದಾಗಿದ್ದಾರೆ. ಎಂ.ಬಿ.ಪಾಟೀಲ್ ಅವರ ಜತೆಯಲ್ಲಿ ಸುಮಾರು 8 ಮಂದಿ ಶಾಸಕರು ಈ ನಿಯೋಗದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದ್ದು. ಇನ್ನು ಕೆಲವರು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ.

ದೆಹಲಿಯಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ಹತ್ತಕ್ಕೂ ಹೆಚ್ಚು ಶಾಸಕರು ಒಗ್ಗಟ್ಟಾಗಿದ್ದಾರೆ. ಇನ್ನೂ ಹಲವರು ಯಾವುದೇ ಸಂದರ್ಭದಲ್ಲಾದರೂ ಮೈತ್ರಿ ಸರ್ಕಾರದಿಂದ ತಟಸ್ಥವಾಗಿ ಉಳಿಯಲು ಮತ್ತು ತಮ್ಮ ಪ್ರತಿಭಟನೆಯನ್ನು ಶಾಸನ ಸಭೆಯಲ್ಲಿ ತೋರಿಸಲು ನಿರ್ಧರಿಸಿದ್ದಾರೆ.

Facebook Comments

Sri Raghav

Admin