ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ,ಮೇ 20- ಮತದಾನೋತ್ತರ ಸಮೀಕ್ಷೆಗಳ ಮೇಲೆ ನನಗೆ ಅಷ್ಟಾಗಿ ನಂಬಿಕೆಯಿಲ್ಲ. ನಮ್ಮ ಪ್ರಕಾರ ಎನ್‍ಡಿಎ 200ರಿಂದ 225 ಸ್ಥಾನ ಪಡೆಯಬಹುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಸಮೀಕ್ಷೆಗಳು ಸತ್ಯವಾದರೆ ಅದಕ್ಕೆ ನಾವು ತಲೆ ಬಾಗುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ 18 ಸ್ಥಾನಗಳಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದರು.

ಮಂಡ್ಯ ಮತದಾನೋತ್ತರ ಸಮೀಕ್ಷೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. 7 ಸಮೀಕ್ಷೆಗಳಲ್ಲಿ ನಾಲ್ಕು ನಿಖಿಲ್ ಪರವಾಗಿದೆ. ಮೂರು ಸುಮಲತಾ ಅವರ ಪರವಾಗಿದೆ. ಈ ರೀತಿ ಸಮೀಕ್ಷೆಗಳಲ್ಲಿ ಗೊಂದಲವಿದೆ. ಯಾಕೆ ಆತುರ ಪಡಬೇಕು. 23ರವರೆಗೆ ಕಾಯೋಣ ಎಂದು ಹೇಳಿದರು.

Facebook Comments

Sri Raghav

Admin