‘ಜಿಗಜಿಣಗಿಯವರ ಮನೆ ಮುಂದೆಯೇ ಕಾಲುವೆಗೆ ನೀರು ಹರಿಸುತ್ತೇವೆ’

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ಏ.20-ಕೇಂದ್ರ ಸಚಿವ ರಮೇಶ ಜಿಗಜಿಣಗಿಯವರ ಮನೆಯ ಮುಂದೆ ರಸ್ತೆ ಮಾಡಿರುವ ನಾವು ಅವರ ಮನೆಯ ಮುಂದೆಯೇ ಕಾಲುವೆಗೆ ನೀರು ಹರಿಸುತ್ತೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿರುಗೇಟು ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಯಾವ ನೀರಾವರಿ ಯೋಜನೆಗಳೂ ತಟಸ್ಥವಾಗುವುದಿಲ್ಲ.

ವಿಜಯಪುರದ ನೀರಾವರಿ ಯೋಜನೆಗಳು ಸ್ಥಗಿತವಾಗಿವೆ ಎಂಬ ವಿಧಾನಪರಿಷತ್ ಸದಸ್ಯ ಅರುಣ ಶಹಪುರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು ನನ್ನ ಅವಧಿಯಲ್ಲಿ ಆರಂಭಿಸಿದ ಎಲ್ಲ ಯೋಜನೆಗಳನ್ನು ಪ್ರಸ್ತುತ ಸರ್ಕಾರ ಪೂರ್ಣಗೊಳಿಸಲು ಬದ್ಧವಾಗಿದೆ ಎಂದಿದ್ದಾರೆ.

ತಿಡಗುಂದಿ ಅಕ್ವಾಡೆಕ್ಟ್ ಏಷ್ಯಾದಲ್ಲಿಯೇ ಮಾದರಿ ಯೋಜನೆಯಾಗಿದ್ದು, ಕೆಲಸ ವಿಳಂಬವಾಗಿರಬಹುದೇ ಹೊರತು ಸ್ಥಗಿತಗೊಂಡಿಲ್ಲ. ಜುಲೈ ನಂತರ ತಿಡಗುಂದಿ ಕಾಲುವೆಗೆ ನೀರು ಹರಿದು, ಎಲ್ಲ ಕೆರೆಗಳು ತುಂಬಲಿವೆ ಎಂದು ಹೇಳಿದ್ದಾರೆ.

ಬಿಜೆಪಿಯವರಿಗೆ ಇಷ್ಟು ಬೇಗ ನೀರಾವರಿ ಕೆಲಸಗಳು ಪೂರ್ಣಗೊಂಡವಲ್ಲ ಎಂದು ಗಾಬರಿ ಹುಟ್ಟಿಸಿದೆ. ಯೋಜನೆಗಳು ಪೂರ್ಣಗೊಳ್ಳುವವರೆಗೆ ಅರುಣ ಶಹಪುರ ಆತಂಕಕ್ಕೊಳಗಾಗದೆ, ನೆಮ್ಮದಿಯಿಂದ ಇರಲಿ. ಬಹುಶಃ ಅವರು ಮಾಹಿತಿ ಕೊರತೆಯಿಂದ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಮನೆಯ ಮುಂದೆ ನಾವು ರಸ್ತೆ ನಿರ್ಮಿಸಿದಂತೆ, ಅವರ ಮನೆಯ ಮುಂದೆ ಏಷ್ಯಾದ ಅತೀ ದೊಡ್ಡ, ತಾಂತ್ರಿಕತೆಯಲ್ಲಿ ವಿಭಿನ್ನವಾಗಿರುವ ತಿಡಗುಂದಿ ವಯಾಡಕ್ಟ್ ನಲ್ಲಿ ನೀರು ಹರಿಸುತ್ತೇವೆ. ಇನ್ನಾದರೂ ಬಿಜೆಪಿಯವರು ಮನಬಂದಂತೆ ಮಾತನಾಡದೆ ನಮ್ಮ ಕಾರ್ಯವನ್ನು ನೋಡಬೇಕೆಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ