ಐರೋಪ್ಯ ಒಕ್ಕೂಟ ನಾಯಕರ ಜತೆ ಜೈಶಂಕರ್ ಮಹತ್ವದ ವಿಷಯಗಳ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಬ್ರುಸ್ಸೆಲ್ಸ್ (ಬೆಲ್ಜಿಯಂ), ಫೆ.18-ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇಂದು ಐರೋಪ್ಯ ಒಕ್ಕೂಟದ (ಯುರೋಪಿಯನ್ ಯೂನಿಯನ್-ಇಯು) ಉನ್ನತ ನಾಯಕರನ್ನು ಭೇಟಿ ಮಾಡಿ ವಿವಿಧ ಮಹತ್ವದ ವಿಷಯಗಳ ಕುರಿತ ಸಮಾಲೋಚನೆ ನಡೆಸಿದರು.

ಭಾರತ ಮತ್ತು ಯುರೋಪ್ ಸಮುದಾಯಕ್ಕೆ ಪರಸ್ಪರ ಸಹಕಾರಿ ಮತ್ತು ಪ್ರಯೋಜನಕಾರಿಯಾಗುವ ಆರ್ಥಿಕ ಸಹಕಾರ, ವಾತಾವಣರ ಬದಲಾವಣೆ ಮತ್ತು ಸಾಮಥ್ರ್ಯ ನಿರ್ಮಾಣ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಜೈಶಂಕರ್ ಮತ್ತು ಇಯು ನಾಯಕರು ಮಾತುಕತೆ ನಡೆಸಿದರು.

ಬೆಲ್ಜಿಯಂ ರಾಜಧಾನಿ ಬ್ರುಸ್ಸೆಲ್ಸ್‍ನಲ್ಲಿ ನಡೆದ ಈ ಭೇಟಿ ಸಂದರ್ಭದಲ್ಲಿ ಅವರು, ಅಂತಾರಾಷ್ಟ್ರೀಯ ಸಹಭಾಗಿತ್ವಗಳಿಗಾಗಿ ಐರೋಪ್ಯ ಸಮುದಾಯದ ಆಯುಕ್ತ ಜುಟ್ಟಾ ಉರ್ಪಿಲೈನೆನ್ ಅವರನ್ನು ಭೇಟಿ ಮಾಡಿ, ಸಾಮಥ್ರ್ಯ ನಿರ್ಮಾಣ ಮತ್ತು ಅಭಿವೃದ್ದಿ ಸಹಭಾಗಿತ್ವ ಕುರಿತು ಚರ್ಚಿಸಿದರು

ಕಳೆದ ವಾರಂತ್ಯದಲ್ಲಿ ಜರ್ಮನಿ ಮುನಿಚ್‍ನಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಹಾಜರಿದ್ದರು. ಮುಂದಿನ ತಿಂಗಳು ಬ್ರುಸ್ಸೆಲ್ಸ್‍ನಲ್ಲಿ ನಡೆಯಲಿರುವ ಭಾರತ-ಐರೋಪ್ಯ ಒಕ್ಕೂಟದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಿಯೋಗ ಭಾಗವಹಿಸುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ವೇದಿಕೆ ಸಿದ್ಧಗೊಳಿಸುವ ನಿಟ್ಟಿನಲ್ಲಿಯೂ ಜೈಶಂಕರ್ ಕಾರ್ಯೋನ್ಮುಖರಾಗಿದ್ದಾರೆ. ತಮ್ಮ ಜರ್ಮನ್ ಮತ್ತು ಬೆಲ್ಜಿಯಂ ಭೇಟಿ ಫಲಪ್ರದವಾಗಿದೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.

Facebook Comments

Sri Raghav

Admin