ಔಷಧಿ ಖರೀಸಿದವರ ವಿವರ ಪಡೆಯದ 110 ಮೆಡಿಕಲ್ ಶಾಪ್‍ಗಳ ಲೈಸೆನ್ಸ್ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ಕೋವಿಡ್‍ಗೆ ಸಂಬಂಧಿಸಿದ ರೋಗ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಔಷಧ ಖರೀದಿಸಿದವರ ವಿವರಗಳನ್ನು ಫಾರ್ಮಾ ಪೋರ್ಟ್‍ನಲ್ಲಿ ಭರ್ತಿ ಮಾಡದ ಔಷಧಿ ಅಂಗಡಿಗಳ ಪರವಾನಗಿಗಳನ್ನು ಅಮಾನತುಪಡಿಸಲಾಗಿದೆ.

ಮೆಡಿಕಲ್ ಶಾಪ್‍ಗಳಲ್ಲಿ ಔಷಧಿ ಖರೀದಿಸುವವರ ವಿವರಗಳನ್ನು ಪಡೆಯದೆ ಔಷಧಿ ಮಾರಾಟ ಮಾಡಲಾಗುತ್ತಿದೆ. ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಇಂತಹ ಬೇಜವಾಬ್ದಾರಿ ತೋರಿರುವ ಔಷಧಿ ಮಳಿಗೆಗಳ ಪರಾವನಿಗೆ ರದ್ದು ಪಡಿಸಿ ಅಮಾನತಿನಲ್ಲಿಡಲು ಸರ್ಕಾರ ಸೂಚಿಸಿದೆ.

ಸರ್ಕಾರವು ಆರೋಗ್ಯ ಅಗತ್ಯತೆಗಳನ್ನು ತಲುಪಿಸಲು ಮತ್ತು ಹೆಚ್ಚಿನ ಅಪಾಯದಲ್ಲಿರುವವರನ್ನು ರಕ್ಷಿಸಲು ಹಾಗೂ ಸಾಂಕ್ರಾಮಿಕ ರೋಗದ ಪ್ರಾಥಮಿಕ ಲಕ್ಷಣಗಳನ್ನು ಗುರುತಿಸಲು ಔಷಧಿ ಅಂಗಡಿಗಳಿಂದ ಖರೀದಿಸಿದ ಮಾಹಿತಿಯು ಮಹತ್ವದ್ದಾಗಿದೆ.

ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಇಲಾಖೆಯು ಔಷಧಿ ಖರೀದಿಸುವವರ ಮಾಹಿತಿಯನ್ನು ವೆಬ್‍ಗೆ ಹಾಕಲು ತಿಳಿಸಿತ್ತು. ಇದರಲ್ಲಿ ವಿಫಲವಾಗಿರುವ 110 ಮೆಡಿಕಲ್ ಶಾಪ್‍ಗಳನ್ನು ನಿರ್ದಿಷ್ಟ ಅವಧಿಗೆ ಅಮಾನತು ಮಾಡಲಾಗಿದೆ.

ಕಲಬುರಗಿ- 70, ಬೆಂಗಳೂರು -03, ಬೀದರ್ – 4, ವಿಜಯಪುರ – 15, ಮೈಸೂರು- 4, ರಾಯಚೂರು- 9, ಬಾಗಲಕೋಟೆ- 5 ಒಟ್ಟು 110 ಔಷಧಿ ಅಂಗಡಿಗಳ ಪರವಾನಗಿ ಅಮಾನಪಡಿಸಲಾಗಿದೆ.

Facebook Comments