ಸ್ವಚ್ಛತೆಗೆ ಆದ್ಯತೆ ನೀಡದ 38 ಮೆಡಿಕಲ್ ಶಾಪ್‍ಗೆ ಬೀಗ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು,ಏ.7-ಸ್ವಚ್ಛತೆಗೆ ಆದ್ಯತೆ ನೀಡದ ಹಾಗೂ ವ್ಯಾಪಾರ ದಾಖಲೆ ಸಮರ್ಪಕವಾಗಿಟ್ಟುಕೊಳ್ಳದ 38 ಮೆಡಿಕಲ್ ಶಾಪ್‍ಗಳಿಗೆ ಡ್ರಗ್ ಕಂಟ್ರೋಲರ್ ಬೀಗ ಜಡಿದಿದ್ದಾರೆ. ಜಮ್ಮು,ದೊಡಾ, ಕಿಸ್ತ್‍ವಾರ್, ಕಥುವಾ ಹಾಗೂ ಸಾಂಬಾ ಜಿಲ್ಲೆಗಳಲ್ಲಿ ಶೋಧ ನಡೆಸಿದ ಡ್ರಗ್ ಕಂಟ್ರೋಲರ್ ಅಧಿಕಾರಿಗಳು 38 ಶಾಪ್‍ಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಶಾಪ್ ಮಾಲೀಕರಿಗೆ ನಿಗಧಿತ ಸಮಯದೊಳಗೆ ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿಟ್ಟುಕೊಂಡು ನಿಯಮಗಳನ್ನು ಪಾಲಿಸದಿದ್ದರೆ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

Facebook Comments