ಕೊರೊನಾ ಸೋಂಕಿತನ ಬಂಧನಕ್ಕೆ ತೆರಳಿದ್ದ 22 ಸಿಬ್ಬಂದಿಗೆ ಕ್ವಾರಂಟೈನ್

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು,ಏ.26- ಕೊರೊನಾ ಸೋಂಕು ತಗಲಿರುವ ಯುವಕನೊಬ್ಬನನ್ನು ಬಂಧಿಸಿದ್ದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಎಸ್‍ಐ ಸೇರಿದಂತೆ 10 ಮಂದಿ ಪೊಲಿಸರನ್ನು ಹಾಗೂ ಚಂದನದೂರು ಗ್ರಾಪಂ ಪಿಡಿಓ, ಗ್ರಾಮಪಡೆಯ 12 ಮಂದಿ ಯುವಕರನ್ನು ತಪಾಸಣೆಗೊಳಪಡಿಸಿ ಕ್ವಾರಂಟೈನ್‍ನಲ್ಲಿರಿಸಲಾಗಿದೆ.

ಮಾ.23 ರಂದು ಬೆಳಗಿನ ಜಾವ 3-30 ರಲ್ಲಿ ಹಿಂದೂಪುರದಿಂದ ಬೆಂಗಳೂರಿಗೆ ದನದ ಮಾಂಸವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ದೊರೆತ ಮಾಹಿತಿ ಮೇರೆಗೆ ಬೊಲೇರೋ ಗೂಡ್ಸ್ ವಾಹನವನ್ನು ತಪಾಸಣೆ ಮಾಡಿದಾಗ ಅದರಲ್ಲಿದ್ದ 3 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮೂರು ಮಂದಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಐಸೋಲೇಶನ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಕ್ವಾರಂಟೈನಲ್ಲಿದ್ದ ಮೂವರನ್ನು ತಪಾಸಣೆಗೊಳಪಡಿಸಿದಾಗ ಓರ್ವ ಯುವಕನಿಗೆ ಕೊರೊನಾ ಪಾಸಿಟೀವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ , ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಮತ್ತು ಇತರೆ ಸಿಬ್ಬಂದ್ದಿ ಸೇಇ 22 ಮಂದಿಯನ್ನು ತಪಾಸಣೆಗೊಳಪಡಿಸಿ ಕ್ವಾರಂಟೈನ್‍ನಲ್ಲಿರಿಸಲಾಗಿದೆ.

22 ಮಂದಿಯ ಗಂಟಲು ಧ್ರವ ಮತ್ತು ರಕ್ತವನ್ನು ಪರೀಕ್ಷೆಗೆ ರವಾನಿಸಲಾಗಿದ್ದು ವರದಿ ಬಂದ ಬಳಿಕವಷ್ಟೇ ಕೊರೊನಾ ಸೋಂಕು ಹರಡಿರುವ ಬಗ್ಗೆ ದೃಡಪಡಿಸಲಾಗುವುದು ಎಂದು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

# ಐಜಿ ಭೇಟಿ:
ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರು ದಕ್ಷಿಣ ವಿಭಾಗದ ಐಜಿ ಶರತ್‍ಚಂದ್ರ ನಗರಕ್ಕೆ ಬೇಟಿ ನೀಡಿ ಕ್ವಾರಂಟೈನಲ್ಲಿದ್ದ ಸಿಬ್ಬಂದ್ದಿಗಳನ್ನು ಬೇಟಿ ಮಾಡಿ ಯಾವುದೇ ರೀತಿಯ ಆತಂಕಪಡದಂತೆ ಸಿಬ್ಬಂದಿಗಳಿಗೆ ದೈರ್ಯ ತುಂಬಿದರು.

# ಸಮಸ್ಯೆ ಆಲಿಸಿದ ಐಜಿ:
ನಗರದ ಪೊಲೀಸ್ ವಸತಿ ಗೃಹ ಸಮುಚ್ಚಯಕ್ಕೆ ಭೇಟಿ ನೀಡಿದ ಐಜಿ ಶರತ್ ಚಂದ್ರ ಪೊಲೀಸ್ ಸಿಬ್ಬಂದ್ದಿಗಳ ಹೆಂಡತಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು, ಬಹುತೇಕ ಮಂದಿಗೆ ಕುಡಿಯುವ ನೀರಿನ ಸಮಸ್ಯೆ ಕೇಳಿಬಂದ ಹಿನ್ನೆಲೆಯಲ್ಲಿ ಒಂದು ನೀರಿನ ಓವರ್‍ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಪ್ರಸ್ಥಾವನೆಯನ್ನು ಸಲ್ಲಿಸುವಂತೆ ವೃತ್ತ ನಿರೀಕ್ಷಕರಿಗೆ ಸೂಚಿಸಿದರು.

# ತುರ್ತುಸೇವೆ:
ತುರ್ತು ಔಷಧಿ ಹಾಗೂ ಇತರೆ ಅಗತ್ಯ ವಸ್ತುಗಳನ್ನು ತರಲು ಒರ್ವ ಸಿಬ್ಬಂದ್ದಿಯನ್ನೂ ಸಹ ಈಗಾಗಲೇ ನೇಮಿಸಲಾಗಿದೆ ಎಂದು ಸಿಪಿಐ ಎಸ್.ರವಿ ಈ ಸಂದರ್ಭದಲ್ಲಿ ತಿಳಿಸಿದರು. ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ವೃತ್ತನಿರೀಕ್ಷಕ ಎಸ್.ರವಿ. ಎಸ್‍ಐಗಳಾದ ಅವಿನಾಶ್, ರಾಘವೇಂದ್ರ ಈ ಸಂದರ್ಭದಲ್ಲಿ ಆಗಮಿಸಿದ್ದರು.

Facebook Comments

Sri Raghav

Admin