ಔಷಧ ಕೊಳ್ಳಲು ಈಗ ಹೊಸ ಆ್ಯಪ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.5- ಕೋವಿಡ್ -19 ಸೋಂಕುಗಳನ್ನು ನಿಯಂತ್ರಿಸುವ ಪೂರ್ವಭಾವಿ ಕ್ರಮವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ಶೀತ, ಜ್ವರ, ಗಂಟಲು ನೋವು, ಕೆಮ್ಮು ಇತ್ಯಾದಿಗಳಿಗೆ ಔಷಧಿಗಳನ್ನು ಖರೀದಿಸುವ ಜನರ ದಾಖಲೆಯನ್ನು ಇಡುವುದು ಔಷಧಾಲಯಗಳು ಮತ್ತು ವೈದ್ಯಕೀಯ ಮಳಿಗೆಗಳಿಗೆ ಕಡ್ಡಾಯವಾಗಿದೆ. ಈಗ ಈ ಕೆಲಸಗಳು ಇನ್ನಷ್ಟು ಸರಳವಾಗಿಸಲು ಉಚಿತ ಆ್ಯಂಡ್ರಾಯ್ಡï ಆ್ಯಪ್ ಅನ್ನು ಪರಿಚಯಿಸಲಾಗಿದೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ಎಚ್‍ಸಿಜಿ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಶಾಲ್ ರಾವ್ ಅನೆಕಾಮ್ಪೋಸ್ ಆ್ಯಪ್ ಬಿಡುಗಡೆಗೊಳಿಸಿದರು. ಈ ಆ್ಯಪ್‍ನಲ್ಲಿ ಔಷಧಾಲಯ ಮತ್ತು ವೈದ್ಯಕೀಯ ಮಳಿಗೆಗಳು ಡಿಜಿಟಲ್ ವಿಧಾನದ ಮೂಲಕ ಎಲ್ಲಾ ಮಾರಾಟಗಳ ಮಾಹಿತಿ ಇಡಬಹುದು ಮತ್ತು ಈ ದತ್ತಾಂಶವನ್ನು ಇತರ ರಾಜ್ಯಗಳೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು.

ಈ ಆ್ಯಪ್ ತುಂಬಾ ಸರಳ, ಸುಭದ್ರ ಮತ್ತು ಬಳಸಲು ಸುಲಭ. ದತ್ತಾಂಶಗಳು ಕ್ರೌಡ್‍ನಲ್ಲಿ ಭದ್ರವಾಗಿ ಶೇಖರಣೆ ಯಾಗಲಿದೆ ಮತ್ತು ಮಳಿಗೆಗಳು ಪ್ರತಿ ನಿತ್ಯ ರಾಜ್ಯಗಳಿಗೆ ವರದಿ ಸಲ್ಲಿಸಬಹುದು. ಔಷಧಾಲಯಗಳು, ಆಸ್ಪತ್ರೆಗಳು, ಶಾಲೆಗಳು, ರೆಸ್ಟೋರೆಂಟ್‍ಗಲು ಸಲೋನ್‍ನಲ್ಲಿ , ಪೆಟ್ರೋಲ್ ಬಂಕ್‍ಗಳು, ಚಿಲ್ಲರೆ ಅಂಗಡಿಗಳು ಇತ್ಯಾದಿಗಳಲ್ಲಿ ತ್ವರಿತ ಮತ್ತು ಸುಲಭ ವಾಗಿ ಬಳಸಬಹುದು ಎಂದು ಅನೆ ಕಾಮ್‍ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅನುರಾಗ್.ಎಸ್ ತಿಳಿಸಿದ್ದಾರೆ.

Facebook Comments