ಪೊಲೀಸರ ಪಿಸ್ತೂಲ್ ಪೊಲೀಸರ ಪ್ರದರ್ಶನ ವಸ್ತುವಲ್ಲ : ಸಂಸದೆ ಮೀನಾಕ್ಷಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.6- ಹೈದರಾಬಾದ್‍ನಲ್ಲಿ ಪಶುವೈದ್ಯೆ  ಅತ್ಯಾಚಾರಿ ಹಂತಕರಿಗೆ ಪೊಲೀಸರು ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸಿರುವುದನ್ನು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸ್ವಾಗತಿಸಿದ್ದಾರೆ. ಲೋಕಸಭೆಯ ಪ್ರಶ್ನೋತ್ತರ ಕಲಾಪದಲ್ಲಿಂದು ವಿಷಯ  ಪ್ರಸ್ತಾಪಿಸಿದ ಅವರು, ಪೊಲೀಸರ ಬಳಿ ಇರುವ ಪಿಸ್ತೂಲು ಪ್ರದರ್ಶನ ವಸ್ತುವಲ್ಲ. ಪೊಲೀಸರಿಗೆ ಪ್ರಾಣಾಪಾಯ ತಂದೊಡ್ಡಿ ಪರಾರಿಯಾಗುತ್ತಿದ್ದ ಆರೋಪಿಗಳಿಗೆ ಗುಂಡು ಹಾರಿಸುವುದು ಅನಿವಾರ್ಯವಾಗಿತ್ತು ಎಂದರು.

ಪಿಸ್ತೂಲು ಪೊಲೀಸರ ಶೋ ಪೀಸ್ ಅಲ್ಲ. ಅನಿವಾರ್ಯವಾದಾಗ ಆರೋಪಿಗಳಿಗೆ ಗುಂಡು ಹಾರಿಸುವುದು ಅನಿವಾರ್ಯ. ಇದು ಸರಿಯಾದ ಕ್ರಮ ಎಂದು ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಹೈದರಾಬಾದ್ ಎನ್‍ಕೌಂಟರ್ ಪ್ರಕರಣವನ್ನು ಬಹುತೇಕ ಮಹಿಳಾ ಸಂಸದರು ಸ್ವಾಗತಿಸಿದ್ದಾರೆ.

# ಆರೋಪಿಗಳಿಗೆ ಸರಿಯಾದ ಶಿಕ್ಷೆಯಾಗಿದೆ..
ನವದೆಹಲಿ, ಡಿ.6-ಪಶುವೈದ್ಯೆ ದಿಶಾ ಮೇಲಿನ ಅತ್ಯಾಚಾರ, ಕೊಲೆ ಆರೋಪಿಗಳಿಗೆ ಸರಿಯಾದ ಶಿಕ್ಷೆಯಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾಶರ್ಮಾ ಹೇಳಿದ್ದಾರೆ. ತೆಲಂಗಾಣ ಪೊಲೀಸರ ಕ್ರಮವನ್ನು ಶ್ಲಾಘಿಸಿರುವ ಅಧ್ಯಕ್ಷೆ, ಕಾನೂನಿನಡಿಯಲ್ಲಿಯೇ ಆರೋಪಿಗಳಿಗೆ ಈ ರೀತಿ ಶಿಕ್ಷೆಯಾಗಲಿ ಎಂದು ಆಶಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮೇರೆ ಮೀರಿದೆ. ಕಾಮಪಿಪಾಸುಗಳೀಗೆ ಎಲ್ಲೆಡೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಹೇಳಿದ್ದಾರೆ.

# ಎನ್‍ಕೌಂಟರ್ ಮಾಡಿದ್ದು ತಪ್ಪು ನೇಣು ಹಾಕಬೇಕಿತ್ತು
ನವದೆಹಲಿ, ಡಿ.6- ಹೈದರಾಬಾದ್‍ನಲ್ಲಿ ಇಂದು ಮುಂಜಾನೆ ನಡೆದ ಎನ್‍ಕೌಂಟರ್ ಘಟನೆಯನ್ನು ಭಯಾನಕ ಎಂದು ಹೇಳಿರುವ ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲಬಾರದಿತ್ತು. ಅವರಿಗೆ ಕಾನೂನು ಪ್ರಕಾರ ನೇಣುಹಾಕಬೇಕಿತ್ತು ಎಂದು ಹೇಳಿದ್ದಾರೆ.

ಸಂಸತ್ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಮಾಜಿ ಸಚಿವೆ, ಕೊಲ್ಲಲೇಬೇಕೆಂದು ಎನ್‍ಕೌಂಟರ್ ಮಾಡುವ ಕ್ರಮ ಸರಿಯಲ್ಲ. ಇದು ಭಯಾನಕ ಘಟನೆ. ತಪ್ಪಿತಸ್ಥರಿಗೆ ನೇಣು ಹಾಕಬೇಕಿತ್ತು ಎಂದು ಹೇಳಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಂಡರೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ನ್ಯಾಯಾಲಯದ ಅಗತ್ಯ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

Facebook Comments