ಆರ್ ಆರ್ ನಗರದ 9 ವಾರ್ಡ್‍ಗಳ ಕಾರ್ಪೊರೇಟರ್ ಗಳೊಂದಿಗೆ ಸಚಿವ ಎಸ್‍ಟಿಎಸ್ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.10- ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ರಾಜರಾಜೇಶ್ವರಿ ನಗರ ವ್ಯಾಪ್ತಿಯ 9 ವಾರ್ಡ್‍ಗಳ ಕಾರ್ಪೊರೇಟರ್ ರ್‍ಗಳ ಸಭೆ ನಡೆಸಲು ಸೋಮವಾರವೇ ವ್ಯವಸ್ಥೆ ಮಾಡುವಂತೆ ಸಹಕಾರ ಸಚಿವ ಹಾಗೂ ರಾಜರಾಜೇಶ್ವರಿ ನಗರದ ಮೇಲುಸ್ತುವಾರಿಗಳಾದ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜರಾಜೇಶ್ವರಿ ನಗರ ವಲಯದ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಉನ್ನತಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ತ್ವರಿತ ಕ್ರಮವಾಗಬೇಕು. ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ವಲಯದ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಆಲಿಸಲಿದ್ದೇನೆ ಎಂದು ತಿಳಿಸಿದರು.

ಪಾಸಿಟಿವ್ ಪ್ರಕರಣ ಬಂದ ಬೀದಿಗಳಲ್ಲಿ ಹಾಗೂ ಮನೆಗಳಲ್ಲಿ ಸಮರ್ಪಕವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಈ ಬಗ್ಗೆ ದೂರುಗಳು ಬರದಂತೆ ಕ್ರಮ ವಹಿಸಬೇಕು. ಜತೆಗೆ ಎಲ್ಲಿ ಸಮಸ್ಯೆ ಕಂಡಬಂದರೂ ತಕ್ಷಣವೇ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಪೆÇಲೀಸ್ ಸಿಬ್ಬಂದಿ ಸೇರಿ 148 ಮಂದಿಯ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಒಂದು ವಾರವಾದರೂ ವರದಿ ಬಾರದೇ ಇರುವುದು ಸಮಸ್ಯೆಯಾಗುತ್ತಿದೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಮತ್ತು ಸಚಿವರ ಗಮನಕ್ಕೆ ತರಲಾಯಿತು.

# ಸ್ವ್ಯಾಬ್ ಕೊಟ್ಟ ಮೇಲೆ ಮನೆಯಲ್ಲಿರಲಿ: ಕೋವಿಡ್ ಪರೀಕ್ಷೆ ಮಾಡಿಸಿದ ಮೇಲೆ ವರದಿ ಬರುವ ತನಕ ಮನೆಯಿಂದ ಹೊರಗಡೆ ಬರದಂತೆ ನೋಡಿಕೊಳ್ಳಬೇಕು. ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾP್ಟïಗಳನ್ನು ಜÁಗರೂಕತೆಯಿಂದ ಗುರುತಿಸಿ ನಿಯಂತ್ರಣಕ್ಕೆ ತರಬೇಕು ಎಂಬ ಸಲಹೆ-ಸೂಚನೆ ನೀಡಲಾಯಿತು.

ಅಧಿಕಾರಿಗಳಿಂದ ಇಲ್ಲ ಸ್ಪಂದನೆ- ಆರೋಪ: ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಬಹಳ ಸಬೂಬುಗಳು ಕೇಳಿಬರುತ್ತಿವೆ. ಪಾಸಿಟಿವ್ ಬಂದ ಕೇಸ್‍ಗಳ ಮನೆಯವರಿಗೆ ಮೂಲ ಸೌಲಭ್ಯ ನೀಡುತ್ತಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ ಸಹ ಅವರ ಮನೆ ಬಾಗಿಲಿಗೆ ಸಿಗುತ್ತಿಲ್ಲ. ಹೀಗಾಗಿ ಅವರು ಅನಿವಾರ್ಯವಾಗಿ ಮನೆಯಿಂದ ಹೊರಬಂದು ಕೊಳ್ಳುವ ಪರಿಸ್ಥಿತಿ ಇದೆ. ಸೀಲ್ ಡೌನ್ ವ್ಯವಸ್ಥೆಯೂ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳು ಕೆಲವು ಕಾಪೆರ್Çರೇಟರ್‍ಗಳಿಂದ ಕೇಳಿಬಂದಿದೆ.

ಡಿಸಿಪಿ ರಮೇಶ್ ಕುಮಾರ್ ಮಾತನಾಡಿ, ಕೋವಿಡ್ ಪರೀಕ್ಷೆ ಬಳಿಕ ವರದಿ ಬರುವುದು ವಿಳಂಬವಾಗುತ್ತದೆ. ಪಾಸಿಟಿವ್ ಪತ್ತೆಯಾದ ಬಳಿಕ ಬಿಬಿಎಂಪಿಯವರು ಕೆಲವೊಮ್ಮೆ ಮರುದಿನ ಸೋಂಕಿತರ ಮನೆಗೆ ಬರುತ್ತಾರೆ. ಇಷ್ಟರ ಮಧ್ಯೆ ಭಯಗೊಂಡಿರುವ ಸೋಂಕಿತರು ಹಾಗೂ ಅವರ ಮನೆಯವರಿಂದ ದೂರಿನ ಕರೆಗಳು ಬರುತ್ತಲೇ ಇದ್ದು, ಇಂತಹ ಸಮಸ್ಯೆಗಳು ಪರಿಹಾರಗೊಳ್ಳಬೇಕು ಎಂದು ಮನವಿ ಮಾಡಿದರು.

ಕ್ವಾರಂಟೈನ್ ವ್ಯವಸ್ಥೆ ಸರಿಯಾಗಿರಲಿ: ಒಬ್ಬ ಪಾಸಿಟಿವ್ ಸೋಂಕಿತನಿಂದ 15 ಮಂದಿ ಪ್ರೈಮರಿ ಕಾಂಟ್ಯಾP್ಟï ಇರುತ್ತಾರೆ. ಹೀಗಾಗಿ ಅವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಬೇಕು. ಕಂಟೈನೆಂಟ್ ಝೋನ್‍ಗಳಿಗೆ ವೈದ್ಯಾಧಿಕಾರಿಗಳು ಮಾತ್ರ ಹೋಗುವಂತಾಗಬೇಕು, ಶಂಕಿತ ಸೋಂಕಿತರು ಹೊರಬಂದು ಪರೀಕ್ಷೆ ಮಾಡಿಸಿಕೊಳ್ಳುವ ಪರಿಸ್ಥಿತಿ ಬರಬಾರದು.

ಮಾಜಿ ಶಾಸಕ ಮುನಿರತ್ನ, ಆರ್‍ಆರ್ ನಗರ ವಲಯದ ಜೆ.ಸಿ.ಜಗದೀಶ್, ಕೋವಿಡ್ ಉಸ್ತುವಾರಿ ಐಎಎಸ್ ಅಧಿಕಾರಿ ಡಾ.ವಿಶಾಲ್, ಬೆಂಗಳೂರು ದಕ್ಷಿಣ ಎಸಿ ಶಿವಣ್ಣ, ಡಿಸಿಪಿ ರಮೇಶ್ ಕುಮಾರ್, ರಾಮನಗರ ಎಸಿಪಿ ಸೇರಿದಂತೆ 14 ವಾರ್ಡ್‍ಗಳ ಪಾಲಿಕೆ ಸದಸ್ಯರು, ಎಂಜಿನಿಯರ್‍ಗಳು, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Facebook Comments