ವಿಶೇಷ ಪ್ಯಾಕೇಜ್‍ಗೆ ಮನವಿ : ಇಲ್ಲಿದೆ ಪ್ರಧಾನಿ ಜೊತೆಗಿನ ವಿಡಿಯೋ ಕಾನರೆನ್ಸ್ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.10-ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭೀಕರ ಮಳೆಯಿಂದ ಪ್ರವಾಹ ಉಂಟಾಗಿ ಭಾರೀ ಪ್ರಮಾಣದ ನಷ್ಟ ಅನುಭವಿಸಿರುವ ಹಿನ್ನಲೆ ರಾಜ್ಯಕ್ಕೆ ಶೀಘ್ರ ಮುಂಗಡವಾಗಿ ತಕ್ಷಣವೇ ವಿಶೇಷ ಪ್ಯಾಕೇಜ್‍ನ ಆರ್ಥಿಕ ನೆರವು ಮತ್ತು ಅಧ್ಯಯನ ತಂಡ ಕಳುಹಿಸಿಕೊಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿದಂತೆ ಮತ್ತಿತರ ಅಕಾರಿಗಳು ವಿಡಿಯೋ ಕಾನರೆನ್ಸ್ ನಡೆಸಿದರು.

ವಿಡಿಯೋ ಕಾನರೆನ್ಸ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಜಿಲ್ಲಾಕಾರಿಗಳು ನೀಡಿರುವ ವರದಿಯಲ್ಲಿ ಪ್ರಾಥಮಿಕ ಅಂದಾಜಿನ ಪ್ರಕಾರ 80 ಸಾವಿರ ಹೆಕ್ಟೇರ್‍ಗೂ ಹೆಚ್ಚು ಪ್ರದೇಶಗಳಲ್ಲಿ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ನಾಶವಾಗಿವೆ. ಈವರೆಗೂ 3,500 ಕಿ.ಮೀ ರಸ್ತೆ ನಾಶವಾಗಿದೆ. 393 ಕಟ್ಟಡಗಳು, 250 ಸೇತುವೆಗಳು, 104 ಎಂಐ ಟ್ಯಾಂಕ್‍ಗಳು ಕುಸಿದುಬಿದ್ದಿವೆ ಎಂದು ವಿವರಣೆ ನೀಡಿರುವುದಾಗಿ ಹೇಳಿದರು.

ರಾಜ್ಯದ ಒಟ್ಟು 56 ತಾಲ್ಲೂಕುಗಳಲ್ಲಿ ಪ್ರವಾಹ ಉಂಟಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ 4000 ನಷ್ಟ ಉಂಟಾಗಿರಬಹುದು. ಗುಡ್ಡ ಕುಸಿತ, ಕಡಲಕೊರೆತ, ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದು, ಟ್ರಾನ್ಸ್‍ಫರ್ಮರ್‍ಗಳು ಹಾಳಾಗಿವೆ. 885 ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನೆರೆ ಬಂದಿದೆ ಎಂದು ವಿವರ ನೀಡಿದರು.

ಕಳೆದ ವರ್ಷದ ಜೂನ್-ಜುಲೈ ತಿಂಗಳಿಗೆ ಹೋಲಿಸಿದರೆ ಈ ಬಾರಿ ಧಾರವಾಡ, ಗದಗ, ಬೆಳಗಾವಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಅದರಲ್ಲೂ ಮಡಿಕೇರಿಯಲ್ಲಿ ಶೇ.500ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಬೊಮ್ಮಾಯಿ ಅಂಕಿಅಂಶಗಳ ಮಾಹಿತಿಯನ್ನು ಒದಗಿಸಿದರು.

ರಾಜ್ಯದಲ್ಲಿ 1774 ಪುರ್ನವಸತಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಗತ್ಯವಿರುವ ಕಡೆ ಗಂಜಿ ಕೇಂದ್ರಗಳನ್ನು ತೆರೆಯುವಂತೆ ಜಿಲ್ಲಾಕಾರಿಗಳಿಗೆ ಸೂಚಿಸಲಾಗಿದೆ. ಈಗಿನ ಮಾಹಿತಿ ಪ್ರಕಾರ 3000 ಮನೆಗಳಗಳಿಗೆ ಹಾನಿಯಾಗಿದೆ.

ನೆರೆಯಲ್ಲಿ ಪ್ರಾಣ ಹಾನಿ ಸಂಭವಿಸಿದರೆ 5 ಲಕ್ಷ, ಸಂಪೂರ್ಣ ಮನೆ ಕುಸಿದು ಬಿದ್ದರೆ ಶೇ .75ರಷ್ಟು ಮನೆ ಕುಸಿದು ಬಿದ್ದಿದ್ದರೆ 5 ಲಕ್ಷ, ಭಾಗಶಃ ಕುಸಿದಿದ್ದರೆ 3 ಲಕ್ಷ, ಪಾತ್ರೆಗಳು, ದಿನಬಳಕೆಯ ವಸ್ತುಗಳು ನಾಶವಾಗಿದ್ದರೆ 10 ಸಾವಿರ ಪರಿಹಾರವನ್ನು ನೀಡುತ್ತಿದ್ದೇವೆ. ದೇಶದ ಯಾವುದೇ ರಾಜ್ಯಗಳಲ್ಲೂ ಇಷ್ಟು ದೊಡ್ಡ ಮಟ್ಟದ ಪರಿಹಾರವನ್ನು ನೀಡುತ್ತಿಲ್ಲ ಎಂದು ಬೊಮ್ಮಾಯಿ ಸಮರ್ಥಿಸಿಕೊಂಡರು.

ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಭಾರತೀಯ ವಾಯುಪಡೆಗೆ ಸೇರಿದ ನಾಲ್ಕು ಹೆಲಿಕಾಪ್ಟರ್‍ಗಳನ್ನುಮೀಸಲಿಡಲಾಗಿದೆ. ಅಲ್ಲದೆ ಅಗತ್ಯವಿರುವ ಕಡೆ ಇವುಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ಕೊಡಲಾಗಿದೆ.

ಒಂದು ತಿಂಗಳು ಮುಂಚಿತವಾಗಿಯೇ ರಾಜ್ಯಕ್ಕೆ ಎನ್‍ಡಿಆರ್‍ಎಫ್ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಸಿದೆ. ಸರ್ಕಾರದ ಮನವಿ ಮೇರೆಗೆ ಸೇನಾಪಡೆಯು ಆಗಮಿಸಿದೆ. ಅಗತ್ಯವಿರುವ ಕಡೆ ಇವರನ್ನು ನಿಯೋಜನೆ ಮಾಡಿಕೊಳ್ಳುವಂತೆ ಜಿಲ್ಲಾಕಾರಿಗಳಿಗೆ ಸೂಚಿಸಿದ್ದೇವೆ.

ರಕ್ಷಣಾ ಕಾರ್ಯ ಚುರುಕುಗೊಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಪ್ರತಿ ಗಂಟೆಗೊಮ್ಮೆ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡುವಂತೆ ಮುಖ್ಯಮಂತ್ರಿ ಅವರು ಸೂಚನೆ ಕೊಟ್ಟಿದ್ದಾರೆ. ಸರ್ಕಾರ ಸಮಾರೋಪಾದಿಯಲ್ಲಿ ಪರಿಹಾರವನ್ನು ಕೈಗೊಂಡಿದೆ. ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಜಿಲ್ಲಾಡಳಿತ ನೀಡುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸಲಹೆ ಮಾಡಿದರು.

15 ನಿಮಿಷಗಳ ಕಾಲ ನಡೆದ ವಿಡಿಯೋ ಕಾನರೆನ್ಸ್‍ನಲ್ಲಿ ಪ್ರಧಾನಿ ಅವರಿಗೆ ಸಚಿವರಾದ ಬೊಮ್ಮಾಯಿ, ಆರ್.ಅಶೋಕ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು 12 ಜಿಲ್ಲೆಗಳಲ್ಲಿ ಮಳೆಯಿಂದ ಉಂಟಾಗಿರುವ ನೆರೆ, ಮನೆಗಳ ಕುಸಿತ, ಬೆಳೆಗಳು, ಜಾನುವಾರುಗಳು ಕೊಚ್ಚಿಹೋಗಿರುವುದು, ಸಾವು ಸೇರಿದಂತೆ ಪ್ರತಿಯೊಂದನ್ನು ಅಂಕಿಅಂಶಗಳ ಸಹಿತ ಪ್ರಧಾನಿಗೆ ಮನವರಿಕೆ ಮಾಡಿದರು.

ರಾಜ್ಯ ಸರ್ಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಮೋದಿ ಅವರು ತಕ್ಷಣವೇ ನೆರೆ ಪರಿಹಾರ ಬಿಡುಗಡೆ ಮಾಡುವ ಸಂಬಂಧ ಸ್ಪಷ್ಟ ಭರವಸೆ ನೀಡಲಿಲ್ಲ. ಆದರೆ ಕರ್ನಾಟಕಕ್ಕೆ ಅಧ್ಯಯನ ತಂಡ ಹಾಗೂ ನಾಲ್ಕು ಎನ್‍ಡಿಆರ್‍ಎಫ್ ತಂಡ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಡುವ ಆಶ್ವಾಸನೆ ನೀಡಿದರು.

ಮಹಾಮಳೆಯಿಂದ 13 ಜನ ಪ್ರಾಣ ಕಳೆದುಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಸಾವಿರಾರು ಕಿ.ಮೀ ರಸ್ತೆ, ವಿದ್ಯುತ್ ಕಂಬಗಳು, ಸೇತುವೆಗಳು, ಕೆರೆಕಟ್ಟೆಗಳು, ಹಳ್ಳಕೊಳ್ಳಗಳು ನಾಶವಾಗಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ 4000 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ. ಇದರ ಪ್ರಮಾಣ ಇನ್ನು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಕ್ಷಣವೇ ಮುಂಗಡ ಪರಿಹಾರವನ್ನು ನೀಡಬೇಕೆಂದು ಕೋರಿದರು.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲಕೊರೆತ ಉಂಟಾಗಿ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ರೈತರು ಎಲ್ಲವನ್ನೂ ಕಳೆದುಕೊಂಡು ಸಂಕಷ್ಟ ಸ್ಥಿತಿಗೆ ಸಿಲುಕಿದ್ದಾರೆ.  ರಾಜ್ಯ ಸರ್ಕಾರ ತನ್ನ ಇತಿಮಿತಿಯಲ್ಲಿ ಸಂತ್ರಸ್ತರಿಗೆ ಸ್ಪಂದಿಸುವ ಕೆಲಸ ಮಾಡಿದೆ.

ಮಳೆ ಹಾನಿಗೊಳಗಾದ ಜಿಲ್ಲೆಗಳಿಗೆ ತತ್‍ಕ್ಷಣವಾಗಿ ಐದು ಕೋಟಿ ಸೇರಿದಂತೆ ಒಟ್ಟು 50 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದೇವೆ. ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ ಎಂದು ವಸ್ತುಸ್ಥಿತಿಯನ್ನು ವಿವರಿಸಿದರು. ಪ್ರತ್ಯೇಕ ತಂಡ ಕಳುಹಿಸಿ: ಮುಖ್ಯವಾಗಿ ಕಳೆದ ಬಾರಿಯಂತೆ ಈ ಬಾರಿಯೂ ಕೃಷ್ಣಕೊಳ್ಳದ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.

ಹೀಗಾಗಿ ಕೃಷ್ಣನದಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಹರಿಯುತ್ತಿರುವುದರಿಂದ ಈ ಮೂರು ರಾಜ್ಯಗಳಿಗೂ ಪ್ರತ್ಯೇಕವಾದ ಅಧ್ಯಯನ ತಂಡವನ್ನು ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.

ಜತೆಗೆ ಪಶ್ಚಿಮಘಟ್ಟ , ಕೃಷ್ಣ ಜಲಾನಯನ, ಕಾವೇರಿ ಜಲಾನಯನ ಮತ್ತು ಕಾವೇರಿ ಜಲಾನಯನ ಹಾಗೂ ಕರಾವಳಿ ಭಾಗಕ್ಕೆ ಪ್ರತ್ಯೇಕವಾದ ಅಧ್ಯಯನ ತಂಡವನ್ನು ತಕ್ಷಣವೇ ಕಳುಹಿಸಿಕೊಡಬೇಕೆಂಬ ಬೇಡಿಕೆಯನ್ನಿಟ್ಟರು.

ಪರಿಹಾರ ಕಾರ್ಯವನ್ನು ಚುರುಕುಗೊಳಿಸಲು ನಾಲ್ಕು ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಪಡೆ(ಎನ್‍ಡಿಆರ್‍ಎಫ್)ಯನ್ನು ಕಳುಹಿಸಿಕೊಡುವಂತೆಯೂ ಸರ್ಕಾರ ಮನವಿ ಮಾಡಿದೆ. ಅಧ್ಯಯನ ತಂಡ ಕೇಂದ್ರಕ್ಕೆ ವರದಿ ನೀಡಿದ ನಂತರ ಪರಿಹಾರವನ್ನು ಬಿಡುಗಡೆ ಮಾಡುವ ಆಶ್ವಾಸನೆಯನ್ನು ಕೊಟ್ಟರು.

Facebook Comments

Sri Raghav

Admin