ಭಾರತದ ರಾಯಭಾರಿ ಹರ್ಷವರ್ದನ್ ಶ್ರಿಂಗ್ಲಾ-ಅಮೆರಿಕಾ ಅಧ್ಯಕ್ಷ ಟ್ರಂಪ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗಟನ್, ಜ.13- ಭಾರತದ ಅಮೇರಿಕಾ ರಾಯಭಾರಿ ಹರ್ಷವರ್ದನ್ ಶ್ರಿಂಗ್ಲಾ ಅವರು ಇಂದು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಸದೃಢವಾದ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕವಾದ ಕಾರಣಕ್ಕೆ ಅಮೆರಿಕಾ ರಾಯಬಾರಿ ಸ್ಥಾನ ತೊರೆದು ಭಾರತಕ್ಕೆ ಮರಳುತ್ತಿರುವ ಹರ್ಷವರ್ದನ್ ಶ್ರಿಂಗ್ಲಾ ಅವರು ಇಂದು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ವಾಷಿಂಗಟನ್‍ನ ವೈಟ್‍ಹೌಸ್‍ನಲ್ಲಿ ಭೇಟಿ ಮಾಡಿ, ಭಾರತ ಮತ್ತು ಅಮೆರಿಕಾ ನಡುವೆ ದ್ವಿಪಕ್ಷೀಯ ಒಪ್ಪಂದಗಳಿಗೆ ಸಂಪೂರ್ಣ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ.

ಭಾರತದ ರಾಯಭಾರಿ ವರ್ಗಾವಣೆಯಾದ ವೇಳೆ ಅವರನ್ನು ಭೇಟಿ ಮಾಡಿ ಅಮೆರಿಕಾದ ಅಧ್ಯಕ್ಷರು ಬಿಳ್ಕೋಟ್ಟಿದ್ದು ಇದೇ ಪ್ರಥಮ ಎಂದು ಹೇಳಲಾಗಿದೆ.

Facebook Comments