ಕೊರೊನಾದಿಂದ ವೈದ್ಯ ಸಾವು, ಮೇಘಾಲಯದಲ್ಲಿ ಮೊದಲ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಶಿಲ್ಲಾಂಗ್, ಏ.15-ಈಶಾನ್ಯ ಪ್ರಾಂತ್ಯದ ಎಂಟು ರಾಜ್ಯಗಳಲ್ಲಿ ಕೊರೊನಾ ಕಬಂಧ ಬಾಹುಗಳು ಬಿಗಿಯಾಗುತ್ತಿದ್ದು, ಸಾವು ಮತ್ತು ಸೋಂಕಿ ಪ್ರಕರಣಗಳು ಹೆಚ್ಚಾಗುತ್ತಿದೆ. ಮೇಘಾಲಯದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ತನ್ನ ಬಲಿ ಪಡೆದಿದೆ.

ರಾಜಧಾನಿ ಶಿಲ್ಲಾಂಗ್‍ನ ಖ್ಯಾತ ವೈದ್ಯ ಡಾ. ಜಾನ್ ಎಲ್. ಸೈಲೋ (68) ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ತಿಳಿಸಿದ್ದಾರೆ. ಡಾ. ಜಾನ್ ಸೈಲೋ ಅವರು ಶಿಲ್ಲಾಂಗ್‍ನಲ್ಲಿ ಬೇಥಾನಿ ಹಾಸ್ಪಟಿಲ್‍ನ ಸಂಸ್ಥಾಪಕರು, ಜನಪ್ರಿಯ ವೈದ್ಯರಾಗಿದ್ದ ಇವರಿಗೆ ಸೋಮವಾರ ಸಂಜೆ ವೈರಾಣು ಸೋಂಕು ಕಾಣಿಸಿಕೊಂಡಿತ್ತು.

ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು 2.45ರ ನಸುಕಿನಲ್ಲಿ ಕೊನೆಯುಸಿರೆಳೆದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಈಗಾಗಲೇ ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಸಾವು ಪ್ರಕರಣಗಳು ಸಂಭವಿಸಿವೆ. ಈ ಮಹಾಮಾರಿಯ ಸೋಂಕು ಮತ್ತಷ್ಟು ಪ್ರದೇಶಗಳಿಗೂ ಹಬ್ಬುವ ಆತಂಕವಿದೆ.

ಭೂಪಾಲ್ ಅನಿಲ ದುರಂತದಿಂದ ಪಾರಾಗಿದ್ದ ಐವರನ್ನು ನುಂಗಿದ ಬೈರಸ್ ಭೂಪಾಲ್, ಏ.15-ಸಾವು ಯಾವ ರೀತಿ ಬಂದೊದಗುತ್ತದೋ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇದಕ್ಕೊಂದು ನಿದರ್ಶನ ಮಧ್ಯಪ್ರದೇಶದ ರಾಜಧಾನಿ ಭೂಪಾಲ್. 1984ರಲ್ಲಿ ಸಂಭವಿಸಿದ ಭೂಪಾಲ್ ಅನಿಲ ಸೋರಿಕೆಯ ಭೀಕರ ದುರಂತದಲ್ಲಿ ಪ್ರಾಣಾಪಾಯದಿಂದ ಪರಾಗಿದ್ದ ಐವರು ಸಂತ್ರಸ್ತರನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿರುವುದು ವಿಧಿ ವಿಪರ್ಯಾಶ.

ಮಧ್ಯಪ್ರದೇಶದಲ್ಲಿ ಮೃತಪಟ್ಟವರಲ್ಲಿ ಐವರು ಭೂಪಾಲ್ ಗ್ಯಾಸ್ ಟ್ರಾಜೆಡಿ ಸಂತ್ರಸ್ತರು. ಅತ್ಯಂತ ವಿಷಯುಕ್ತ ಅನಿಲದಿಂದ ಇವರು ಬಚಾವಾಗಿದ್ದರೂ, ಅಗೋಚರ ವೈರಾಣು ಇವರನ್ನು ಬಲಿ ತೆಗೆದುಕೊಂಡಿದೆ.

ಇವರೆಲ್ಲರೂ 40 ವರ್ಷದಿಂದ 80 ವರ್ಷಗಳ ವಯೋಮಾನದವರು. ಭೂಪಾಲ್ ಅನಿಲ ಗುರ್ಘಟನೆಯ ಕರಾಳತೆಯನ್ನು ಕಣ್ಣಾರೆ ಕಂಡು, ಸಾವಿನ ದವಡೆಯಿಂದ ಪಾರಾಗಿದ್ದ ಇವರನ್ನು ಕೋವಿಡ್-19 ಆಪೆÇೀಷನ ತೆಗೆದುಕೊಂಡು ರಣಕೇಕೆ ಹಾಕಿದೆ.

Facebook Comments

Sri Raghav

Admin