ಮರುಮೌಲ್ಯಮಾಪನದಲ್ಲಿ 625 ಅಂಕ ಪಡೆದ ಮೇಘನಾಗೆ 50ಸಾವಿರ ನೆರವು

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ 07:- ಎಸ್‌ಎಸ್‌ಲ್‌ಸಿ ಮರುಮೌಲ್ಯಮಾಪನದ ನಂತರ 625ಕ್ಕೆ 625 ಅಂಕ ಗಳಿಸಿರುವ ನಗರದ ಬೆಂಗಳೂರು ಮಾಂಟೋಸ್ಸರಿ ಶಾಲೆಯ ಸಾಯಿ ಮೇಘನಾರನ್ನು ಶಾಸಕ ಕೆ.ಶ್ರೀನಿವಾಸಗೌಡ ಸನ್ಮಾನಿಸಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ 50 ಸಾವಿರ ನೆರವು ನೀಡುವುದಾಗಿ ಘೋಷಿಸಿದರು.

ಮನ್ವಂತರ ಜನಸೇವಾ ಟ್ರಸ್ಟ್ ವತಿಯಿಂದ ಬಾಲಕಿಯನ್ನು ಪುರಸ್ಕರಿಸಿದ್ದು, ಟ್ರಸ್ಟ್ ಅಧ್ಯಕ್ಷರೂ ಆದ ಬ್ಯಾಲಹಳ್ಳಿ ಗೋವಿಂದಗೌಡ ವಿದ್ಯಾರ್ಥಿನಿಯ ಉನ್ನತ ವಿದ್ಯಾಭ್ಯಾಸಕ್ಕೆ 50 ಸಾವಿರ ರೂ ನೆರವಿನ ಭರವಸೆ ನೀಡಿದರು.  ಎಸ್‌ಎಸ್‌ಲ್‌ಸಿಯಲ್ಲಿ ಕೋಲಾರ ಜಿಲ್ಲೆಯ ಈ ವಿದ್ಯಾರ್ಥಿನಿ ರಾಜ್ಯಕ್ಕೆ ಮೊದಲು ಬಂದಿರುವುದು ಜಿಲ್ಲೆಯ ಹೆಮ್ಮೆ ಎಂದ ಅವರು, ಇಂತಹ ಮಕ್ಕಳಿಗೆ ನೆರವಾಗಲು ಮನ್ವಂತರ ಸಿದ್ದವಿದೆ ಎಂದರು.

ಸಾಧಕಿ ಸಾಯಿ ಮೇಘನಾ ಜಿಲ್ಲೆಯ ಮಾಲೂರು ತಾಲ್ಲೂಕಿನ ದಿನ್ನೇರಿ ಹಾರೋಹಳ್ಳಿ ನಿವಾಸಿ ಶ್ರೀನಿವಾಸಪ್ಪ,ರತ್ನಕುಮಾರಿ ರೈತ ದಂಪತಿ ಪುತ್ರಿಯಾಗಿದ್ದು, ಈಗ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‍ಕುಮಾರ್, ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ದಕ್ಷಿಣ ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸಪ್ಪ, ಕಲ್ಲಂಡೂರು ರಾಜಣ್ಣ ಮತ್ತಿತರರಿದ್ದರು.

Facebook Comments